ರಾಹುಲ್ ಮೇಲಿನ ಪ್ರಧಾನಿ ಮೋದಿ ಸವಾಲಿಗೆ ರಮ್ಯಾ ಪ್ರತ್ಯುತ್ತರ ಕೊಟ್ಟಿದ್ದು ಹೀಗೆ!

ಗುರುವಾರ, 3 ಮೇ 2018 (09:42 IST)
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ 15 ನಿಮಿಷಗಳ ಕಾಲ ಕರ್ನಾಟಕ ಸರ್ಕಾರದ ಸಾಧನೆಗಳನ್ನು ಓದುವಂತೆ ಮಾಡಿದ ಸವಾಲಿಗೆ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಪ್ರತ್ಯುತ್ತರ ನೀಡಿದ್ದಾರೆ.

ತಮ್ಮ ಟ್ವಿಟರ್ ಪೇಜ್ ನಲ್ಲಿ ರಮ್ಯಾ ಪ್ರಧಾನಿ ಮೋದಿಗೆ ವ್ಯಂಗ್ಯವಾಗಿ ಸವಾಲು ಹಾಕಿದ್ದಾರೆ. 15 ನಿಮಿಷದ ಸವಾಲನ್ನು 1 ನಿಮಿಷಕ್ಕೆ ಇಳಿಸಿ ರಿಯಾಯಿತಿ ನೀಡಿದ್ದಾರೆ!

‘ನೀವು ಪ್ರಧಾನಿಯಲ್ವಾ? ಹಾಗಾಗಿ ನಿಮಗೆ ರಿಯಾಯಿತಿ 1 ನಿಮಿಷ ಮಾತಾಡಿದರೂ ಸಾಕು. ಸುಳ್ಳು ಹೇಳದೇ ನಿರರ್ಗಳವಾಗಿ ಮಾತನಾಡಿ ನೋಡೋಣ’ ಎಂದು ರಮ್ಯಾ ಸವಾಲು ಹಾಕಿದ್ದಾರೆ. ಆದರೆ ರಾಹುಲ್ ಗಾಂಧಿ ಮಾತ್ರ ಇದುವರೆಗೆ ಪ್ರಧಾನಿ ಸವಾಲಿಗೆ ಉತ್ತರಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ