ಶಿಕ್ಷಕನೊಬ್ಬನ ಸೇವಾ ಎಸ್ಸಾರ್ ಪುಸ್ತಕವನ್ನು ಇನ್ನೋರ್ವ ಶಿಕ್ಷಕ ಕದ್ದು ಹರಿದಿರುವ ಘಟನೆ ನಡೆದಿದೆ.
ಶಿಕ್ಷಕರ ಸೇವಾ, ದಾಖಲಾತಿ, ಶಿಕ್ಷಕರ ಮಾಹಿತಿ ಇರುವ ಸೇವಾ ಪುಸ್ತಕದ ಎಸ್ಸಾರ್ ಸೇವಾ ಪುಸ್ತಕದಿಂದ 6 ಹಾಳೆ ಹರಿದು ಹಾಕಿದ ಶಿಕ್ಷಕನ ವಿರುದ್ಧ ಈಗ ಅಧಿಕಾರಿಗಳು ಗರಂ ಆಗಿದ್ದಾರೆ.
ಬೈಲಹೊಂಗಲ ಬಿಇಓ ಕಚೇರಿಯ ವ್ಯಾಪ್ತಿಯ ಇಬ್ಬರ ಶಿಕ್ಷಕರ ನಡುವೆ ಆಗಾಗ ಜಗಳವಾಗುತ್ತಿತ್ತು. ಆದರೆ
ಬೈಲಹೊಂಗಲ ತಾಲೂಕಿನ ಕೆಂಗಾನೂರ ಶಾಲೆಯಲ್ಲಿ ಗುರು ಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ನಡೆದ ಘಟನೆ ಇದಾಗಿದೆ.
ಶಿಕ್ಷಕ ಎಸ್. ವಿ. ಪೂಜಾರ್ ಮತ್ತು ಎಸ್. ಬಿ. ಕೌಜಲಗಿ ನಡುವೆ ಜಗಳ, ಹಳೆ ವೈಷಮ್ಯ ಇತ್ತು. ಫೆ. 12 ರಂದು ನಡೆದ ಗುರು ಸ್ಪಂದನಾ ಸಭೆಯಲ್ಲಿ ಎಸ್ಸಾರ್ ಪುಸ್ತಕವನ್ನು ಶಿಕ್ಷಕ ಎಸ್ ವಿ ಪೂಜಾರ್ ಕಳ್ಳತನ ಮಾಡಿದ್ದರು.
ಗುಡಕಟ್ಟಿ ಶಾಲೆಯ ಶಿಕ್ಷಕ ಎಸ್.ಬಿ ಕೌಜಲಗಿ ಎಂಬುವವರ ಸೇವಾ ಎಸ್ಸಾರ್ ಪುಸ್ತಕ ಕಳುವು ಮಾಡಿದ ಶಿಕ್ಷಕ ಪೂಜಾರ್. ಆ ನಂತರ ಆ ಪುಸ್ತಕದಲ್ಲಿದ್ದ 6 ಹಾಳೆಗಳನ್ನು ಕಿತ್ತು ಹಾಕಿದ್ದಾರೆ.
ಈ ಘಟನೆಯನ್ನು ಬೈಲಹೊಂಗಲ ಬಿ ಇ ಓ ಪಾರ್ವತಿ ವಸ್ತ್ರದ್ ಗಮನಕ್ಕೆ ಎಸ್ ಬಿ ಕೌಜಲಗಿ ತಂದಿದ್ದಾರೆ.
ಎಸ್ ವಿ ಪೂಜಾರ ಶಿಕ್ಷಕನೇ ಕಳವು ಮಾಡಿರಬಹುದೆಂದು ಅನುಮಾನ ಹಿನ್ನೆಲೆ ಬಿಇಓಗೆ ದೂರು ನೀಡಿದರು.
ಬಿಇಓ ಪಾರ್ವತಿ ವಸ್ತ್ರದ ಪೊಲೀಸ ಠಾಣೆಗೆ ದೂರು ನೀಡುವ ಕುರಿತು ಪೂಜಾರ್ ಗೆ ಎಚ್ಚರಿಕೆ ನೀಡಿದ ಹಿನ್ನೆಲೆ
ಫೆಬ್ರವರಿ 14 ರಂದು ಬಿಇಓ ಕಚೇರಿಯಲ್ಲಿ ಯಾರೂ ಇಲ್ಲದಾಗ ಎಸ್ಸಾರ್ ಸೇವಾ ಪುಸ್ತಕ ತಂದು ಪೂಜಾರ್ ಬಿಸಾಕಿದ್ದಾನೆ.
ಎಸ್ಸಾರ್ ಸೇವಾ ಪುಸ್ತಕ ತಂದು ಬಿಸಾಕುವ ದೃಶ್ಯ ಕಚೇರಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಮುಚ್ಚಿ ಹಾಕಲು ಅಧಿಕಾರಿ ಯತ್ನ ನಡೆಸಿದ್ದಾರೆ.
ಶಿಕ್ಷಕ ಪೂಜಾರ ಹತ್ತಿರ ಇದ್ದ ಹರಿದು ಹಾಕಿದ ಪೇಜಗಳನ್ನು ವಾಪಸ್ ಪಡೆದ ಬಿಇಓ, ವಿಚಾರಣೆಗೆ ಕಾಯ್ದಿರಿಸಿ ಶಿಕ್ಷಕ ಎಸ್.ವಿ. ಪೂಜಾರ್ ಅಮಾನತ್ತಿಗೆ ಬೆಳಗಾವಿ ಡಿಡಿಪಿಐಗೆ ಅಮಾನತ್ತಿಗೆ ಶಿಫಾರಸ್ಸು ಮಾಡಿದ್ದಾರೆ.