ಬೆಂಗಳೂರು: ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನದ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೂರಕ ಮಾಹಿತಿಯನ್ನು ನೀಡಿದ್ದಾರೆ.
2023ರ ಚುನಾವಣೆಗೂ ಮುಂಚೆ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ಡಿಲೀಟ್ ಆಗ್ತಿತ್ತು. ಅದರ ಬಗ್ಗೆ ಶಾಸಕ ಬಿ.ಆರ್. ಪಾಟೀಲ್ ಅವರು ನಾನು ಎಲೆಕ್ಷನ್ ಕಮಿಷನ್ ಗೆ ದೂರು ಕೊಟ್ಟಿದ್ವಿ ಎಂದು ಅವರು ಹೇಳಿಕೆ ನೀಡಿದ್ದಾರೆ.
ಅಂದು ನಮ್ಮ ದೂರಿನ ಆಧಾರದ ಮೇಲೆ ಒಂದು ಎಫ್ಐಆರ್ ಆಯ್ತು. ಕಲಬುರಗಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಪರಿಶೀಲನೆ ಮಾಡಿದಾಗ 6018 ಮತದಾರರಲ್ಲಿ ಯಾರ್ಯಾರು ಅರ್ಜಿ ಹಾಕಿದ್ರು? ಅದರಲ್ಲಿ 28 ಜನಕ್ಕೆ ಮಾತ್ರ ಮಾಹಿತಿ ಇತ್ತು. ಉಳಿದ ಅರ್ಜಿದಾರರಿಗೆ ಯಾವುದೇ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದರು.
ಈ ಪ್ರಕರಣದ ಬಗ್ಗೆ ಮುಂದೆ ಏನು ಮಾಡಬೇಕು ಅಂತ ಪಾಟೀಲ್ ಹಾಗೂ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಮುಂದೆ ಏನು ಮಾಡಬೇಕು ಅನ್ನುವುದರ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ತನಿಖೆ ಬಗ್ಗೆ ಮುಂದೆ ಏನು ಮಾಡಬೇಕು ಅಂತ ನಾವು ನೋಡುತ್ತೇವೆ. ನಮಗೂ ಸ್ವಲ್ಪ ಮಾಹಿತಿ ಇದೆ ಸಮಯ ಬಂದಾಗ ನಾನೇ ನಿಮ್ಮ ಮುಂದೆ ಬರುತ್ತೇನೆ ಎಂದರು