ಬೆಂಗಳೂರು: ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಉಚಿತವಾಗಿ ಕೊಳವೆ ಬಾವಿ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯ ಫಲ ಪಡೆಯುವುದು ಹೇಗೆ ಇಲ್ಲಿದೆ ಡೀಟೈಲ್ಸ್.
ಗಂಗಾ ಕಲ್ಯಾಣ ಯೋಜನೆ ಎಂದರೇನು?
ರೈತರ ಹೊಲಗಳಿಗೆ ನೀರು ಹರಿಸಲು ಸುಲಭವಾಗುವಂತೆ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ. ರೈತರ ಹೊಲಗಳಿಗೆ ನೀರಾವರಿ ಒದಗಿಸುವ ಸಲುವಾಗಿ ಕೊಳವೆ ಬಾವಿ ಕೊರೆಯುವುದು, ಪಂಪ್ ಸೆಟ್ ತೆಗೆಯಲು ಸರ್ಕಾರದಿಂದ ಹಣ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಿಮ್ಮ ಕೃಷಿ ಭೂಮಿಯಲ್ಲಿ ಕೊಳವೆ ಬಾವಿ ತೆರೆಯಲು, ಪಂಪಿಂಗ್, ವಿದ್ಯುತ್ ಸೌಲಭ್ಯಕ್ಕೂ ಸಹಾಯ ಮಾಡಲಾಗುತ್ತದೆ.
ಸಬ್ಸಿಡಿ ವಿವರ
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 2 ರಿಂದ 2.5 ಲಕ್ಷ ರೂ. ಹಣ ಸಬ್ಸಿಡಿ ಸಿಗುತ್ತದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ರೈತರು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಕರ್ನಾಟಕದಾದ್ಯಂತ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ
ಪರಿಶಿಷ್ಟ ಜಾತಿ/ವರ್ಗದ ಸಣ್ಣ ಮತ್ತು ಅತಿ ಸಣ್ಣರೈತರು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. 8 ಎಕರೆವರೆಗಿನ ಜಮೀನಿಗೆ 4 ಲಕ್ಷ ಹಾಗೂ 15 ಎಕರೆವರೆಗಿನ ಜಮೀನಿಗೆ 6 ಲಕ್ಷ ಸಿಗುತ್ತದೆ.
ಬೇಕಾದ ದಾಖಲೆಗಳು
ಜಾತಿ ಪ್ರಮಾಣ ಪತ್ರ
ಬಿಪಿಎಲ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್ ನ ಪ್ರತಿ
ಇತ್ತೀಚೆಗಿನ ಆರ್ ಟಿಸಿ
ಭೂ ಕಂದಾಯ ಪಾವತಿಸಿದ ರಸೀದಿ
ಜಾಮೀನುದಾರರಿಂದ ಸ್ವಯಂ ಘೋಷಣೆ ಪತ್ರ
ಇವಿಷ್ಟಿದ್ದರೆ ಆನ್ ಲೈನ್ ಮುಖಾಂತರ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.