ಬ್ಲ್ಯಾಕ್ ಫಂಗಸ್ ಬಾರದಂತೆ ತಡೆಯಲು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ

ಶುಕ್ರವಾರ, 4 ಜೂನ್ 2021 (09:30 IST)
ಬೆಂಗಳೂರು: ಕೊರೋನಾ ಬಳಿಕ ಬ್ಲ್ಯಾಕ್ ಫಂಗಸ್ ಜನರಲ್ಲಿ ಹೊಸ ಭೀತಿ ಹುಟ್ಟು ಹಾಕಿದೆ. ಆರೋಗ್ಯ ಪರಿಣಿತರ ಪ್ರಕಾರ ಬ್ಲ್ಯಾಕ್ ಫಂಗಸ್ ತಡೆಯಲು ಏನು ಮಾಡಬೇಕು ಗೊತ್ತಾ?

 
ಕೊರೋನಾಗೆ ಚಿಕಿತ್ಸೆ ಪಡೆದ ಎಲ್ಲರಿಗೂ ಬ್ಲ್ಯಾಕ್ ಫಂಗಸ್ ಬರದು. ಕೇವಲ ತೀವ್ರತರದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೋನಾ ನಿಯಂತ್ರಿಸಲು ಸ್ಟಿರಾಯ್ಡ್ ನೀಡಿದ್ದರೆ ಅದರ ಪರಿಣಾಮವಾಗಿ ಬ್ಲ್ಯಾಕ್ ಫಂಗಸ್ ಬರುವ ಅಪಾಯವಿರುತ್ತದೆ.

ಇದಕ್ಕೆ ನಾವು ಮಾಡಬೇಕೆಂದುದೇನೆಂದರೆ ಅತಿಯಾದ ಸ್ಟೀಮ್ ಮಾಡುವುದನ್ನು ನಿಲ್ಲಿಸುವುದು, ನಾವು ಧರಿಸುವ ಮಾಸ್ಕ್ ನ್ನು ಪ್ರತಿನಿತ್ಯ ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿಗೆ ಒಣಗಲು ಹಾಕಬೇಕು. ಇನ್ನು, ಮಾರುಕಟ್ಟೆಯಿಂದ ತರಕಾರಿ ಖರೀದಿಸುವಾಗ ಅರ್ಧ ಕತ್ತರಿಸಿಟ್ಟ, ಗಾಯವಾದ ತರಕಾರಿಗಳನ್ನು ಖರೀದಿಸಬಾರದು. ಕಣ್ಣು ನೋವು, ದವಡೆ ನೋವು ಇತ್ಯಾದಿ ಆರಂಭಿಕ ಲಕ್ಷಣಗಳು ಕಂಡುಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅಪಾಯದಿಂದ ಪಾರಾಗುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ