ಇನ್ನೊಂದು ವಾರ ಲಾಕ್ ಪಕ್ಕಾ: ಕೆಲವೊಂದು ವಿನಾಯ್ತಿ ಸಾಧ್ಯತೆ

ಗುರುವಾರ, 3 ಜೂನ್ 2021 (09:14 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಸರ್ಕಾರ ಇನ್ನೂ ಒಂದು ವಾರಗಳ ಕಾಲ ಲಾಕ್ ಡೌನ್  ವಿಸ್ತರಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಆದೇಶವೊಂದೇ ಬಾಕಿಯಿದೆ.

 
ಆದರೆ ಈ  ಬಾರಿ ಲಾಕ್ ಡೌನ್ ಕಳೆದ ಬಾರಿಯಷ್ಟು ಕಠಿಣವಾಗಿರುವುದಿಲ್ಲ. ಕೈಗಾರಿಕೆ, ಗಾರ್ಮೆಂಟ್ಸ್, ಅಗತ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗುತ್ತದೆ.

ಎಲೆಕ್ಟ್ರಾನಿಕ್ಸ್, ಅಗತ್ಯ ಸೇವೆಗಳನ್ನು ಉತ್ಪಾದಿಸುವ ಕೈಗಾರಿಕೆಗಳು, ಗಾರ್ಮೆಂಟ್ಸ್ ನಲ್ಲಿ ಶೇ.50 ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಸಿಗಲಿದೆ. ಇದು ಕೈಗಾರಿಕಾ ವಲಯಕ್ಕೆ ಸಮಾಧಾನ ತರಲಿದೆ. ಕೇಂದ್ರದ ನಿಯಮದಂತೆ ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಕರಣಗಳಿರುವ ಪ್ರದೇಶಗಳಲ್ಲಿ ಅನ್ ಲಾಕ್ ಮಾಡಬಹುದಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯಕ್ಕೆ ಶೇ.7.5 ಪಾಸಿಟಿವಿಟಿ ಇದೆ. ಮೈಸೂರಿನಲ್ಲಿ ಅತೀ ಹೆಚ್ಚು ಶೇ.35 ಪಾಸಿಟಿವಿಟಿ ದರವಿದೆ. ಹೀಗಾಗಿ ಇನ್ನೊಂದು ವಾರ ಕಾಲ ಲಾಕ್ ಡೌನ್ ಮಾಡುವುದರ ಬಗ್ಗೆ ಸಿಎಂ ಒಲವು ಹೊಂದಿದ್ದಾರೆ. ಇಂದು ಅಥವಾ ನಾಳೆ ಅಧಿಕೃತ ಆದೇಶ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ