ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ನೇತ್ರದಾನ ಮಾಡಿದ್ದರಿಂದ ಯುವ ಜನರಲ್ಲಿ ಈ ಬಗ್ಗೆ ಅರಿವು ಹೆಚ್ಚಿದೆ. ಆದರೆ ಕೆಲವರಿಗೆ ನೇತ್ರದಾನ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಕೊರತೆಯಿದೆ. ಹಾಗಿದ್ದರೆ ನೇತ್ರದಾನ ಮಾಡುವುದು ಹೇಗೆ? ಇಲ್ಲಿ ನೋಡಿ.
Jeevasarthakathe.karnataka.gov.in ಎಂಬ ವೆಬ್ ಸೈಟ್ ಗೆ ಭೇಟಿ ಕೊಟ್ಟು ನಿಮ್ಮ ಸಾಮಾನ್ಯ ಮಾಹಿತಿ ನೀಡಬೇಕು. ಕೇವಲ 2 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ. ಇದಾದ ಬಳಿಕ ನಿಮ್ಮ ನೋಂದಣಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಬಳಿಕ ನೀವು ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ.
ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಸಹಾಯವಾಣಿ 104 ಕ್ಕೆ ಕರೆ ಮಾಡಬೇಕು. ಒಂದು ವೇಳೆ ನೀವು ಮಾಹಿತಿ ನೀಡದೇ ಹೋದರೆ ನೋಂದಣಿ ಮಾಡಿಸಿಕೊಂಡರೂ ನೇತ್ರದಾನ ಸಾಧ್ಯವಾಗಲ್ಲ.