ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್ ಕಳೆದು ಹೋಗಿದ್ದರೆ ಡುಪ್ಲಿಕೇಟ್ ಪ್ರತಿ ಮಾಡಿಸುವುದು ಹೇಗೆ ನೋಡಿ

Krishnaveni K

ಬುಧವಾರ, 11 ಸೆಪ್ಟಂಬರ್ 2024 (12:22 IST)
ಬೆಂಗಳೂರು: ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್ ಎನ್ನುವುದು ನಮ್ಮ ಜೀವನಪರ್ಯಂತ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆಯಾಗಿ ಬಳಕೆಯಾಗುತ್ತದೆ. ಆದರೆ ಅಕಸ್ಮಾತ್ತಾಗಿ ಇದನ್ನು ಕಳೆದುಕೊಂಡರೆ ಏನು ಮಾಡಬೇಕು? ಇಲ್ಲಿ ನೋಡಿ.

ಸಾಮಾನ್ಯವಾಗಿ ವಯಸ್ಸು ದೃಢೀಕರಣ, ವಿಳಾಸ ದೃಢೀಕರಣ ಇತ್ಯಾದಿಗೆ ಎಲ್ಲಾ ಸರ್ಕಾರಿ ಯೋಜನೆಗಳು ಅಥವಾ ಶೈಕ್ಷಣಿಕ ಉದ್ದೇಶಕ್ಕೆ ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡನ್ನೇ ಕೇಳಲಾಗುತ್ತದೆ. ಹೀಗಾಗಿ ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್ ಎನ್ನುವುದು ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.

ಆದರೆ ಕೆಲವೊಮ್ಮೆ ಎಲ್ಲೋ ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್ ಕಳೆದುಕೊಂಡಾಗ ಅದನ್ನು ಮರಳಿ ಪಡೆಯುವುದು ಹೇಗೆ ಎಂಬ ಚಿಂತೆ ಅನೇಕರಿಗಿರುತ್ತದೆ. ಎಸ್ಎಸ್ಎಲ್ ಸಿ ಮಾರ್ಕ್ ಕಾರ್ಡ್ ಒಮ್ಮೆ ಕಳೆದುಕೊಂಡರೆ ಮತ್ತೆ ಅದರ ನಕಲು ಪ್ರತಿಯನ್ನು ಮಾಡಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಎಸ್ಎಸ್ಎಲ್ ಮಾರ್ಕ್ ಕಾರ್ಡ್ ಮರಳಿ ಮಾಡಿಸಲು ಏನೆಲ್ಲಾ ದಾಖಲೆಗಳು ಬೇಕು, ಹೇಗೆ ಮಾಡುವುದು ಇಲ್ಲಿದೆ ವಿವರ.

ಇತ್ತೀಚೆಗಿನ ದಿನಗಳಲ್ಲಿ ಇದನ್ನು ಆನ್ ಲೈನ್ ಮುಖಾಂತರವೂ ಅಪ್ಲೈ ಮಾಡಬಹುದು https://kseeb.karnataka.gov.in/DuplicateMarksCard/ ಎಂಬ ವೆಬ್ ವಿಳಾಸಕ್ಕೆ ಹೋಗಿ ಅಲ್ಲಿ ಸಿಗುವ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿ ಅದನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ಮುಖಾಂತರವೇ ಅಪ್ ಲೋಡ್ ಮಾಡಬಹುದು. ಅರ್ಜಿ ನಮೂನೆ ಜೊತೆಗೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಆನ್ ಲೈನ್ ಮುಖಾಂತರವೇ ನಿಗದಿತ ಶುಲ್ಕ ಪಾವತಿಸಿ ಬಳಿಕ ಸಂಬಂಧಿಸಿದ ವಿಭಾಗೀಯ ಕಚೇರಿಗಳಲ್ಲಿ ಅರ್ಜಿ ವಿಲೇವಾರಿಯಾಗುತ್ತದೆ. ಬಳಿಕ ನೀವು ಆಧಾರ್ ಕಾರ್ಡ್ ನಲ್ಲಿ ನೀಡಿದ  ವಿಳಾಸಕ್ಕೆ ಡುಪ್ಲಿಕೇಟ್ ಅಂಕ ಪಟ್ಟಿ ಬರುತ್ತದೆ. ಒಂದು ವೇಳೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಯಾಗಿಲ್ಲ ಎಂದು ಸಂದೇಶ ಬರುತ್ತಿದ್ದರೆ ಶುಲ್ಕ ಸಂದಾಯ ಮಾಡಿರುವ ಪಿಜಿಐ ಸಂಖ್ಯೆ, ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಹೆಸರನ್ನು [email protected] ಗೆ ಈಮೇಲ್ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ