ವಿದ್ಯುತ್ ಬಿಲ್ ಪಾವತಿಸಿ ಅಂದದ್ದಕ್ಕೆ ಹೀಗಾ ಮಾಡೋದು?

ಮಂಗಳವಾರ, 30 ಜುಲೈ 2019 (17:12 IST)
ವಿದ್ಯುತ್ ಬಿಲ್ ಪಾವತಿಸಿ ಅಂತ ಹೇಳಿದ್ದಕ್ಕೆ ಬೆಸ್ಕಾಂ ನೌಕರನ ಮೇಲೆ ಹಲ್ಲೆ ನಡೆದಿದೆ.

ಕೋಲಾರದಲ್ಲಿ ಬೆಸ್ಕಾಂ ನೌಕರನ ಮೇಲೆ ಹಲ್ಲೆ ನಡೆದಿದೆ. ಬಾಕಿಯಿದ್ದ ವಿದ್ಯುತ್ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಬಾಕಿಯಿದ್ದ ಕರೆಂಟ್ ಬಿಲ್ ಪಾವತಿಸುವಂತೆ ಕೇಳಿದ್ದೇ ಹಲ್ಲೆಗೆ ಕಾರಣವಾಗಿದೆ. ಹಲ್ಲೆಗೊಳಗಾದ ನೌಕರ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದಾನೆ.

ಕೋಲಾರ ತಾಲೂಕಿನ ನಾಗಲಾಪುರ ಗ್ರಾಮದ ನಾಗರಾಜು ಕೋಳಿಫಾರಂ ಹೊಂದಿದ್ದಾನೆ. ಈ ಕೋಳಿ ಫಾರಂಗೆ ವಿದ್ಯುತ್ ಸಂಪರ್ಕದ ಬಿಲ್ 5 ಸಾವಿರ ರೂಪಾಯಿಗಳಿಗೂ ಹೆಚ್ಚು ಬಾಕಿಯಿದೆ. ಬಾಕಿ ಹಣವನ್ನು 
ಪಾವತಿಸುವಂತೆ ಬೆಸ್ಕಾಂ ನೌಕರ ನವೀನ್ ಮಾಲೀಕರನ್ನು ಕೇಳಿದ್ದಾರೆ. ಆದ್ರೆ ಗ್ರಾಹಕ ನಾಗರಾಜು ಹಣ ಪಾವತಿಸಲು ಒಪ್ಪದೆ ದಬ್ಬಾಳಿಕೆ ನಡೆಸಿದ್ದಾನೆ. 

ಇದ್ರಿಂದಾಗಿ ಕೋಳಿ ಫಾರಂ ಘಟಕಕ್ಕೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದ್ರಿಂದ ರೊಚ್ಚಿಗೆದ್ದ ಗ್ರಾಹಕ ನಾಗರಾಜು, ಬೆಸ್ಕಾಂ ನೌಕರ ನವೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಜಗಳವನ್ನು ನಿಲ್ಲಿಸಿದ್ದಾರೆ. ಹಲ್ಲೆಗೊಳಗಾದ ನವೀನ್ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ