ಚಲಿಸುತ್ತಿದ್ದ ಬಸ್ ನಿಲ್ಲಿಸಿ ಖದೀಮರು ಮಾಡಿದ್ದೇನು?

ಮಂಗಳವಾರ, 2 ಜುಲೈ 2019 (19:51 IST)
ಬಸ್ಸ್ ವೊಂದನ್ನು ಅಡ್ಡಗಟ್ಟಿ ಕಂಡಕ್ಟರ್ ಮೇಲೆ‌ ಹಲ್ಲೆ ನಡೆಸಿ  ಹಣವನ್ನು ಖದೀಮರು ದರೋಡೆ ನಡೆಸಿದ್ದಾರೆ. ಈ ಕೃತ್ಯ ಸಿಸಿಟಿವಿ ಯಲ್ಲಿ ದಾಖಲಾಗಿದೆ.

ಉಡುಪಿಯಿಂದ ಶಿವಮೊಗ್ಗ ಕ್ಕೆ ತೆರಳುತ್ತಿದ್ದ ಬಸ್ಸೊಂದನ್ನ ಗುಂಪೊಂದು ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಕಂಡಕ್ಟರ್ ಬಳಿಯಿದ್ದ ಸಾವಿರಾರು ರೂಪಾಯಿ ಹಣವನ್ನು ದೋಚಿದ ಘಟನೆ ಅಂಗುಂಬೆ  - ತೀರ್ಥಹಳ್ಳಿ ಬಳಿಯ ಮಂಡಗದ್ದೆ ಬಳಿ ನಡೆದಿದೆ.

ನಿಶಾನ್ ಟ್ರಾವೆಲ್ಸ್ ಎನ್ನುವ ಬಸ್ಸು ಮಧ್ಯಾಹ್ನ 3.15 ಕ್ಕೆ ಉಡುಪಿಯಿಂದ ಹೊರಟಿತ್ತು. ಹೆಬ್ರಿ ಸೀತಾನದಿ ಬಳಿ ಕಾರೊಂದರಲ್ಲಿ ಬಂದಿದ್ದ ಗುಂಪು ಸ್ಥಳೀಯರಿಗೆ ಹಲ್ಲೆ ನಡೆಸುತ್ತಿದ್ದನ್ನು‌ ಕಂಡು  ಚಾಲಕ  ಬಸ್ಸು ನಿಲ್ಲಿಸಿದ್ದಾನೆ. ಈ ಸಂದರ್ಭದಲ್ಲಿ ಕಂಡಕ್ಟರ್ ಗಣೇಶ್ ಎನ್ನುವವರು  ಹಲ್ಲೆ‌ ನಡೆಸುತ್ತಿದ್ದವರ ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದಾರೆ. ಇದರಿಂದ ಅಕ್ರೋಶಗೊಂಡ ಗುಂಪು ಎರಡು ಕಾರುಗಳಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಅಂಗುಂಬೆ ಬಳಿ ಮಂಡಗದ್ದೆ ಅರಣ್ಯ ಪ್ರದೇಶಕ್ಕೆ ಬರುತ್ತಿದ್ದಂತೆ ಬಸ್ಸು ಬರುತ್ತಿದ್ದಂತೆ ಪಾನಮತ್ತರಾಗಿದ್ದ ಗುಂಪು ಬಸ್ಸು ಹತ್ತಿ‌ ಕಂಡಕ್ಟರ್ ಗಣೇಶ್ ಗೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಬಸ್ಸಿನಿಂದ‌ ಕೆಳ ಹಾಕಿ ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿ ಆತನಲ್ಲಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಪಾಣಮತ್ತರಾಗಿದ್ದ ಗುಂಪು ಪ್ರಯಾಣಿಕರಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆಯ ಎಲ್ಲಾ ದೃಶ್ಯಗಳು  ಬಸ್ಸಿನಲ್ಲಿದ್ದ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಆರೋಪಿಗಳು  ಉಡುಪಿಯ ಪರ್ಕಳ ಮೂಲದವರು ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ