ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಎಲ್ಲೆಲ್ಲಿ ವೀಕ್ಷಿಸಬಹುದು? ಲಿಂಕ್ ಇಲ್ಲಿದೆ ನೋಡಿ

ಮಂಗಳವಾರ, 14 ಜುಲೈ 2020 (09:29 IST)
ಬೆಂಗಳೂರು: ಇಂದು ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.


ಕೊರೋನಾ ಕಾರಣದಿಂದ ತಡವಾಗಿ ಪರೀಕ್ಷೆ ನಡೆದಿತ್ತು. ಭವಿಷ್ಯದ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಪರೀಕ್ಷೆ ಮುಗಿದು ಫಲಿತಾಂಶದ ನಿರೀಕ್ಷೆ ಶುರುವಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಆನ್ ಲೈನ್ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಅದಕ್ಕಾಗಿ ನೀವು karresults.nic.in ಎಂಬ ವೆಬ್ ವಿಳಾಸವನ್ನು ಕ್ಲಿಕ್ ಮಾಡಿ ‘ಕರ್ನಾಟಕ ಪಿಯು ರಿಸಲ್ಟ್ 2020’ ಎಂಬುದನ್ನು ಕ್ಲಿಕ್ ಮಾಡಿ. ಹೊಸ ಪೇಜ್ ತೆರೆದುಕೊಳ್ಳಲಿದ್ದು, ಅಲ್ಲಿ ವಿದ್ಯಾರ್ಥಿಗಳ ವಿವರ ನೀಡಿ ಫಲಿತಾಂಶ ತಿಳಿದುಕೊಳ್ಳಬೇಕಾಗಿದೆ. ಇದಲ್ಲದೇ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೂ ಫಲಿತಾಂಶ ರವಾನೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ