ಆನ್ ಲೈನ್ ಕ್ಲಾಸ್: ಶಾಲೆಗಳು ಮಾಡಿದ್ದೇ ರೂಲ್ಸ್!

ಮಂಗಳವಾರ, 7 ಜುಲೈ 2020 (08:55 IST)
ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ವರ್ಷ ಆನ್ ಲೈನ್ ತರಗತಿ ನಡೆಸಲು ಸರ್ಕಾರ ಎರಡನೇ ಬಾರಿಗೆ ಒಪ್ಪಿಗೆ ನೀಡಿದ್ದೇ ತಡ. ಕೆಲವು ಖಾಸಗಿ ಶಾಲೆಗಳು ತಮ್ಮದೇ ಆದ ನಿಯಮ ಹಾಕಿಕೊಂಡು ಬೇಕಾಬಿಟ್ಟಿ ತರಗತಿ ನಡೆಸುತ್ತಿವೆ.



ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಮೂರು ದಿನ 45 ನಿಮಿಷಗಳ ಅವಧಿಗೆ ತರಗತಿ ಮಾಡಲು ಅವಕಾಶ ನೀಡಿದೆ. ಇದಕ್ಕೆ ಪ್ರತ್ಯೇಕ ಶುಲ್ಕ ಪಡೆಯುವಂತಿಲ್ಲ.

ಆದರೆ ಕೆಲವು ಖಾಸಗಿ ಶಾಲೆಗಳು ಮಾಡಿದ್ದೇ ರೂಲ್ಸ್ ಆಗಿದೆ. ಪ್ರತಿ ದಿನವೂ ದಿನಕ್ಕೆ ಎರಡು ಗಂಟೆ ತರಗತಿ ಮಾಡುತ್ತಿವೆ. ಅದೂ ಕೆಲವು ಶಾಲೆಗಳಂತೂ ಯೂ ಟ್ಯೂಬ್ ವಿಡಿಯೋ, ರೆಕಾರ್ಡೆಡ್ ವಿಡಿಯೋ ಕಳುಹಿಸಿ ಕಾಟಾಚಾರಕ್ಕೆ ತರಗತಿ ಮಾಡುತ್ತಿವೆ. ಇದೇ ನೆಪದಲ್ಲಿ ಪೋಷಕರಿಂದ ಶುಲ್ಕ ಪೀಕುತ್ತಿವೆ.

ಶಾಲೆಗಳಿಂದ ಬರುವ ವಿಡಿಯೋದಲ್ಲಿರುವ ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಇನ್ನು ಕೆಲವು ಶಾಲೆಗಳು ಇದನ್ನು ಕೇವಲ ಹೋಂ ವರ್ಕ್ ನೀಡುವ ಮಾಧ‍್ಯಮವಾಗಿ ಬಳಸಿಕೊಂಡಿವೆ. ಹೀಗಾಗಿ ಮಕ್ಕಳಿಗೆ ಆನ್ ಲೈನ್ ತರಗತಿ ಎಂಬುದು ಟೈಂ ಪಾಸ್ ಆಗುತ್ತಿದೆಯೇ ಹೊರತು ಯಾವುದೇ ಪ್ರಯೋಜನವಾಗುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ