ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿದ್ದಿದ್ದಕ್ಕೇ ಮಗಳನ್ನು ಕಳೆದುಕೊಂಡೆ ಎಂದ ನೇಹಾ ತಂದೆ

Krishnaveni K

ಶನಿವಾರ, 20 ಏಪ್ರಿಲ್ 2024 (09:45 IST)
Photo Courtesy: Twitter
ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹೀರೇಮಠ್ ಮಗಳು ನೇಹಾ ಹತ್ಯೆಗೀಡಾದ ದುಃಖದಲ್ಲಿ ತಮ್ಮ ರಾಜಕೀಯ ಆಯ್ಕೆ ಬಗ್ಗೆ ಹಿಡಿಶಾಪ ಹಾಕಿದ್ದಾರೆ.

ತಮ್ಮನ್ನು ಸಮಾಧಾನಿಸಲು ಬಂದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮುಂದೆ ನಿರಂಜನ್ ಹೀರೇಮಠ್ ಅಳಲು ತೋಡಿಕೊಂಡಿದ್ದಾರೆ. ಯತ್ನಾಳ್ ಮುಂದೆ ದುಃಖ ತೋಡಿಕೊಂಡ ನಿರಂಜನ್ ಆ ಕಡೆ (ಕಾಂಗ್ರೆಸ್) ಹೋಗಿದ್ದಕ್ಕೇ ಮಗಳನ್ನು ಕಳೆದುಕೊಂಡೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ನಿನ್ನೆ ನೇಹ ಕೊಲೆ ವೈಯಕ್ತಿಕ ಎಂದಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ವಿರುದ್ಧ ನಿರಂಜನ್ ಹರಿಹಾಯ್ದಿದ್ದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದವನಾಗಿ ನನ್ನ ಪರಿಸ್ಥಿತಿಯೇ ಹೀಗಾದರೆ ಉಳಿದವರಿಗೆ ರಕ್ಷಣೆ ಸಿಗುವುದು ಹೇಗೆ ಸಾಧ್ಯ ಎಂದಿದ್ದರು. ಅಲ್ಲದೆ, ತಪ್ಪು ಮಾಹಿತಿಯಿಂದ ನನ್ನ ಕುಟುಂಬದ ಮಾನ ತೆಗಿಬೇಡಿ ಎಂದು ಕಿಡಿ ಕಾರಿದ್ದರು.

ನಿನ್ನೆ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ, ಬಸನಗೌಡ ಪಾಟೀಲ್ ಯತ್ನಾಳ್ ನಿರಂಜನ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನೀವೇ ನಮಗೆ ನ್ಯಾಯ ಕೊಡಿಸಬೇಕು ಎಂದು ಕೈ ಮುಗಿದು ಕೇಳಿಕೊಂಡಿದ್ದರು. ಈ ವೇಳೆ ಜನರು ನೇಹಾ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಯತ್ನಾಳ್ ಗೆ ತೋರಿಸಿದ್ದರು. ನಿಮ್ಮಂತಹ ಖಡಕ್ ವ್ಯಕ್ತಿ ಸಿಎಂ ಆಗಿದ್ದರೆ ಏನೂ ಆಗುತ್ತಿರಲಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ