ಮಂಡ್ಯ ಪೊಲೀಸರ ವಶದಲ್ಲಿದ್ದ ಭಾರೀ ಮೊತ್ತದ ಸ್ಫೋಟಕ ಮಾರಾಟ?

ಸೋಮವಾರ, 2 ಆಗಸ್ಟ್ 2021 (19:53 IST)
ಪೊಲೀಸರ ವಶದಲ್ಲಿದ್ದ ಕಲ್ಲು ಗಣಿಗಾರಿಕೆಗೆ ಬಳಸುವ ಸ್ಫೋಟಕಗಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯಲ್ಲಿ ಸಂಭವಿಸಿದ್ದು, ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು ಮುಚ್ಚಿಟ್ಟು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
14,400 ಜಿಲೆಟಿನ್ ಕಡ್ಡಿಗಳು, 4 ಸಾವಿರ ಎಲೆಕ್ಟ್ರಿಕ್ ಡಿಟೋನೇಟರ್, 540 ನಾನ್ ಎಲೆಕ್ಟ್ರಿಕ್ ಡಿಟೊನೇಟರ್ಗಳು ಅಕ್ರಮ ಮಾರಾಟವಾಗಿದ್ದು, ಗೋದಾಮು ಮಾಲೀಕ ನಜಿಮುಲ್ಲಾ ಷರೀಫ್ ಎಂಬಾತನಿಂದ ಮಾರಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ರವೀಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಜನವರಿ 21ರಂದು ಕೆ.ಆರ್.ಪೇಟೆ ಅಕ್ಕಿಹೆಬ್ಬಾಳು ಅಕ್ರಮವಾಗಿ ಸಾಗಿಸುತ್ತಿದ್ದಾಗ ಸ್ಪೋಟಕ ವಶಕ್ಕೆ ಪಡೆದಿದ್ದ ಪೊಲೀಸರು. ವಶ ಪಡಿಸಿಕೊಂಡಿದ್ದ ಸ್ಪೋಟಕಗಳು ಮ್ಯಾಗಜೀನ್ ಹೌಸ್ನಲ್ಲಿ ಪೊಲೀಸರು ಇರಿಸಿದ್ದರು. ಇವುಗಳನ್ನು  ನಾಶಪಡಿಸಲು ಬಿಡಿಡಿಎಸ್ ತಂಡ ಜಿಲ್ಲೆಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ನಾಜಿಮುಲ್ಲಾ ಷರೀಫ್ ಎಂಬುವರಿಗೆ ಸೇರಿದ್ದ ಮ್ಯಾಗಜೀನ್ ಹೌಸ್ ನಿಂದ ಸ್ಫೋಟಕಗಳನ್ನು ಇರಿಸಲಾಗಿತ್ತು. ಆದರೆ ಕಲ್ಲು ಕ್ವಾರಿ ಮಾಲೀಕರಿಗೆ ಅಕ್ರಮವಾಗಿ ಸ್ಪೋಟಕಗಳನ್ನು ನಾಜಿಮುಲ್ಲಾ ಷರೀಫ್ ಮಾರಿದ್ದಾನೆ. ಜೂನ್ 18ರಂದು ಸ್ಪೋಟಕ ನಾಶ ಪಡಿಸಲು ಬಂದಿದ್ದ ಬಿಡಿಡಿಎಸ್ ತಂಡಕ್ಕೆ ಅಕ್ರಮ ಮಾರಾಟ ಬೆಳಕಿಗೆ ಬಂದಿದೆ ಎಂದು ಅವರು ಆರೋಪಿಸಿದರು.
ನಾಜಿಮುಲ್ಲಾ ಷರೀಫ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ನಾಜಿಮುಲ್ಲಾ ಷರೀಫ್ ಪರಾರಿಯಾಗಿದ್ದಾನೆ. ಸ್ಫೋಟಕ ಅಕ್ರಮ ಮಾರಾಟದಲ್ಲಿ ಪೊಲೀಸರು ಶಾಮೀಲಾಗಿರುವ ಶಂಕೆ ಇದ್ದು, ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತ ಸಂಚು ನಡೆದಿದೆ ಎಂದು ರವೀಂದ್ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ