ಮಾನವೀಯತೆ ಮೆರೆದ ಬಿಎಂಟಿಸಿ ಅಧಿಕಾರಿಗಳು

ಮಂಗಳವಾರ, 23 ನವೆಂಬರ್ 2021 (20:24 IST)
ನಿನ್ನೆ ಹೆಬ್ಬಾಳದ ಎಸ್ಟಿಮ್ ಮಾಲ್ ಬಳಿಯಿರುವ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಲ್ಲಿ 
ಮಹಿಳಾ ಪ್ರಯಾಣಿಕರೊಬ್ಬರು ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನ, ಹಣ ಹಾಗೂ ಮೊಬೈಲ್ ಪೋನ್ ಇದ್ದ ಬ್ಯಾಗ್ ಬಿಟ್ಟು ಹೋಗಿದ್ರು
ಅದನ್ನು ಸ್ಥಳದಲ್ಲಿದ್ದ ಬಿಎಂಟಿಸಿಯ ಟ್ರಾಫಿಕ್ ಕಂಟ್ರೋಲರ್ ಗಳಾದ
ಪ್ರಕಾಶ್ ಮತ್ತು ಶಮಿ ಶಾಬ್ 
ಬ್ಯಾಗ್ ಬಿಟ್ಟು ಹೋಗಿದ್ದ ರಾಜೇಶ್ವರಿ ಎಂಬ ಮಹಿಳಾ ಪ್ರಯಾಣಿಕರ ಬ್ಯಾಗ್ ನಲ್ಲಿದ್ದ
ಪೋನ್ ಗೆ ಕರೆ ಬಂದಿದ್ದು, ನಂತರ ಹೆಬ್ಬಾಳ ಪೊಲೀಸ್ ಸ್ಟೇಷನ್ ಗೆ ಕರೆಸಿಕೊಂಡು  
ವಸ್ತುಗಳನ್ನು ಮಾಲೀಕರು ಪತ್ತೆಹಚ್ಚಿದ ನಂತರ ವಾಪಸ್ ನೀಡಿದ್ರು ಬ್ಯಾಗ್ ನಲ್ಲಿ ಒಂದು ಸಾವಿರ ರುಪಾಯಿ ಕ್ಯಾಶ್, ಏಳು ಗೋಲ್ಡ್ ರಿಂಗ್, ಎರಡು ಗೋಲ್ಡ್ ಚೈನ್, ಮಾಂಗಲ್ಯ ಸರ ಒಂದು, ಕಿವಿ ಓಲೆ ಎರಡು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಇದರ ಮೌಲ್ಯ ಆರು‌ ಲಕ್ಷದ ಮೂವತ್ತೊಂದು ಸಾವಿರದ ಐನೂರು ರೂಪಾಯಿಗಳು ಅಂತ ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ