ಬೆಂಗಳೂರಿನಲ್ಲಿ ನೈಟ್ ಬಸ್ ಮರುಚಾಲನೆ

ಮಂಗಳವಾರ, 16 ನವೆಂಬರ್ 2021 (09:51 IST)
ಬೆಂಗಳೂರು : ಕೋವಿಡ್ ಮಹಾಮಾರಿ ವಕ್ಕರಿಸಿದ ಬಳಿಕ ನಗರದಲ್ಲಿ ಬಿಎಂಟಿಸಿ ಬಸ್ಸುಗಳ ರಾತ್ರಿ ಸೇವೆ ಸ್ಥಗಿತಗೊಂಡಿತ್ತು.
ಇದೀಗ ಎರಡು ವರ್ಷಗಳ ಬಳಿಕ ನೈಟ್ ಸರ್ವಿಸ್ ಪುನಾರಂಭಗೊಂಡಿದೆ. ನಿನ್ನೆ ರಾತ್ರಿಯಿಂದಲೇ ಬಸ್ಸುಗಳ ರಾತ್ರಿ ಸಂಚಾರ ಆರಂಭವಾಗಿದೆ. ದಿನ ನಿತ್ಯ ರಾತ್ರಿ 11:30ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜಧಾನಿ ನಗರಿಯಲ್ಲಿ ಬಸ್ಸುಗಳ ಸೇವೆ ಲಭ್ಯ ಇದೆ. ಅಂದರೆ ಬಿಎಂಟಿಸಿ ಬಸ್ಸುಗಳು ದಿನವಿಡೀ 24 ಗಂಟೆಯೂ ಪ್ರಯಾಣಿಕರಿಗೆ ಲಭ್ಯ ಇರಲಿವೆ.
ನಿನ್ನೆ ಬಿಎಂಟಿಸಿ ನೈಟ್ ಸರ್ವಿಸ್ ಬಸ್ಸುಗಳ ವಿವರ ಪ್ರಕಟಿಸಿದೆ. ಒಟ್ಟು 48 ಮಾರ್ಗಗಳನ್ನ ನೈಟ್ ಸರ್ವಿಸ್ಗೆ ಆಯ್ಕೆ ಮಾಡಲಾಗಿದೆ. ಇಲ್ಲಿ ಒಟ್ಟು 70 ಬಸ್ಸುಗಳು ರಾತ್ರಿಯ ಹೊತ್ತು ಸಂಚರಿಸಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ