ಮನುಷ್ಯರಿಗೆ ಝೀಕಾ ಪಾಸಿಟಿವ್ ಬಂದಿಲ್ಲ.ಆತಂಕ ಬೇಡ- ದಿನೇಶ್ ಗುಂಡೂರಾವ್

ಗುರುವಾರ, 2 ನವೆಂಬರ್ 2023 (21:09 IST)
ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್  ಕಾಣಸಿಕೊಂಡಿದೆ.ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು.ಝೀಕಾ ಬೇರೆ, ನಿಫಾ ಬೇರೆ,ನಿಫಾ ಗಂಭೀರ ವೈರಾಣಾಗಿದ್ದು,ಝೀಕಾ ಬಗ್ಗೆ ಭಯ ಬೇಡ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
ಗರ್ಭಿಣಿಯರು, ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು. ಸೊಳ್ಳೆಗಳಲ್ಲಿ  ಪಾಸಿಟಿವ್ ಕಾಣಿಸಿಕೊಂಡಿದೆ .೧೦ ದಿನಗಳ ಹಿಂದೆ ಈ‌ ರಿಪೋರ್ಟ್ ಬಂದಿದೆ.ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ.ಖಾಯಿಲೆ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ.ಇನ್ನೂ 3 ದಿನಗಳಲ್ಲಿ ರಿಪೋರ್ಟ್ ಬರುವ ಸಾಧ್ಯತೆ ಇದೆ.ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.ಮನುಷ್ಯರಿಗೆ ಪಾಸಿಟಿವ್ ಬಂದಿಲ್ಲ.ಸರ್ವಿಲೆನ್ಸ್ ಮಾಡಿರುವುದಕ್ಕೆ ಈಗ ಪತ್ತೆಯಾಗಿದೆ.ಮನುಷ್ಯರಿಗೆ ಝೀಕಾ ಪಾಸಿಟಿವ್ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ