ಇಡೀ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ- ದಿನೇಶ್ ಗುಂಡೂರಾವ್

ಸೋಮವಾರ, 30 ಅಕ್ಟೋಬರ್ 2023 (17:25 IST)
ಆಪರೇಷನ್ ಕಮಲ ಇಲ್ಲಿ ಮಾತ್ರ ಅಲ್ಲ.ಇಡೀ ದೇಶದಲ್ಲೇ ಇವರು ಮಾಡ್ತಿದ್ದಾರೆ.ವಾಮಮಾರ್ಗದ ಮೂಲಕ ಸರ್ಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ.ಹೇಗಾದ್ರು ಮತ್ತೆ ಅಧಿಕಾರ ಹಿಡಿಯಬೇಕೆಂಬುದು ಇದೆ.ಇಡೀ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ.ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ.ಸೋಲಿಸಿ ಅವರನ್ನ ಮನೆಗೆ ಕಳಿಸಿದ್ದಾರೆ.ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.
 
ಕೆಳಮಟ್ಟಕ್ಕೆ ಅವರು ಇಳಿದಿದ್ದಾರೆ.ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.೧೦೦,೧೦೦೦ ಕೋಟಿ ಹೋದ್ರೂ ಪರವಾಗಿಲ್ಲ.ದುಡ್ಡಿನ ಅಹಂ ಅವರಲ್ಲಿ ಹೆಚ್ಚಾಗಿದೆ.ಐಟಿ,ಇಡಿ,ಸಿಬಿಐ ಅವರ ಬಳಿಯಿವೆ.ಎಲ್ಲವನ್ನ ತೋರಿಸಿ ಸರ್ಕಾರ ಬೀಳಿಸೋ ಪ್ಲಾನ್ ನಡೆಯುತ್ತಿದೆ.ಇವರ ಪ್ರಯತ್ನಗಳೆಲ್ಲ ವಿಫಲವಾಗಲಿವೆ ಎಂದು ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ