ಸಿಎಂ ಆಗಬೇಕು ಎಂಬ ಯಡಿಯೂರಪ್ಪ, ಈಶ್ವರಪ್ಪ ಕನಸು ನನಸಾಗಲ್ಲ- ಸಿದ್ದರಾಮಯ್ಯ

ಭಾನುವಾರ, 2 ಡಿಸೆಂಬರ್ 2018 (11:10 IST)
ಹುಬ್ಬಳ್ಳಿ : ಡಿ.5ರಂದು ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುವ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ‘ಡಿ.5 ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ಆ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಆಗಲಿದೆ ‘ಎಂದು ಹೇಳಿದ್ದಾರೆ.


ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಪತನ ಎಂಬ ಬಿಜೆಪಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ  ಮಾತನಾಡಿದ ಅವರು, ‘ಬಿಜೆಪಿಗೆ ಬಹುಮತ ಬಂದಿಲ್ಲ, ಆದ್ರೂ ಅವರ್ಯಾಕೆ ಕನಸು ಕಾಣ್ತಾ ಇದ್ದಾರೋ ಗೊತ್ತಿಲ್ಲ. ಸಿಎಂ ಆಗಬೇಕು ಎಂಬ ಯಡಿಯೂರಪ್ಪ, ಈಶ್ವರಪ್ಪ ಕನಸು ನನಸಾಗಲ್ಲ. ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ನಮ್ಮ ಸರ್ಕಾರ ಬೀಳುವುದಿಲ್ಲ’ ಎಂದು ಹೇಳಿದ್ದಾರೆ.


ಹಾಗೇ ‘ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿಲ್ಲ. ನನ್ನ ವಿರುದ್ಧ ಯಾರೂ ದೂರು ನೀಡಿಲ್ಲ. ನಮ್ಮ ಶಾಸಕರು ಸಂಪುಟ ವಿಸ್ತರಣೆಗೆ ಅವಸರ ಮಾಡಿಲ್ಲ’ ಎಂದು ತಿಳಿಸಿದ್ದಾರೆ. ಇದೇ ವೇಳೆ ಅವರು, ‘ಪ್ರಧಾನಿ ಮೋದಿ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಲೋಕಪಾಲ್ ಬಿಲ್ ಜಾರಿ ಮಾಡುತ್ತಿಲ್ಲ’ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ