ಷೇರು ಮಾರುಕಟ್ಟೆ ಹೆಸರಲ್ಲಿ ನೂರಾರು ಕೋಟಿ ವಂಚನೆ

ಬುಧವಾರ, 3 ಮೇ 2023 (18:00 IST)
ಷೇರು ಮಾರುಕಟ್ಟೆ ಹೆಸರಲ್ಲಿ ನೂರಾರು ಕೋಟಿ ರೂ.ಹೂಡಿಕೆ ಮಾಡಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.ಎಂ ಬಿ ಬಿ ಗ್ಲೋಬಲ್ ಲಿಮಿಟೆಡ್ ಕಂಪನಿ ಮಾಲೀಕ ಮಹೇಶ್ ಮತ್ತು ಶಿವಾನಂದ ಸೊಮಲಿಂಗ ಹಾಸು ಎಂಬ  ರೋಪಿಗಳನ್ನ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. 5 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 2 ಲಕ್ಷ ರೂ. ಕೊಡುವುದಾಗಿ ನಂಬಿಸಿ ನೂರಾರು ಕೋಟಿ ರೂ. ಹಣವನ್ನು ಸಾರ್ವಜನಿಕರಿಗೆ ವಂಚಿಸಿದ್ದಾರೆ. ಪ್ರೇಮಾ ಕಡ್ಲಿಮತ್ತಿ ಅವರ ಕಡೆಯಿಂದ 1.18 ಕೋಟಿ ರೂ.ಹೂಡಿಕೆ ಮಾಡಿ ಕೊಂಡು ವಂಚಿಸಿದ್ದಾರೆ.ಈ ಹಗರಣದ ಪ್ರಮುಖ ಆರೋಪಿ ಶಿವಾನಂದ ಸೊಮಲಿಂಗ ಹಾಸು ಹಣ ವಾಪಸ್ ಕೇಳಿದವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಇನ್ನೂ ದುಬೈಯಲ್ಲಿರುವ ಕಂಪನಿಯಲ್ಲಿ ಹೂಡಿಕೆ ಮಾಡಿ ವ್ಯವಾಹರ ಮಾಡುತ್ತಿದ್ದೇನೆ ಎಂದು ಅಲ್ಲಿ ಖಾಸಗಿ ಹೋಟೆಲ್ ವಿಡಿಯೊ ತೊರಿಸಿ ಜನರನ್ನ ಯಾಮಾರಿಸಿದ್ದಾರೆ.ಅಲ್ಲದೆ ಇನ್ನು ಜನರನ್ನು ವಂಚನೆ ಮಾಡಲು ಬೃಹತ್ ಭಾರತೀಯ ಕಲ್ಯಾಣ ಪಕ್ಷ ಎಂದು ಮಾಡಿ ಹೊಸ ವಂಚನೆ ಆಟ ನಡೆಸಿದ್ದು ಈಗಾ ಪೊಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ