ಪತ್ನಿ ಮೇಲೆ ಗೆಳೆಯ ಅತ್ಯಾಚಾರ ಮಾಡೋವಾಗ ಬಾಗಿಲು ಕಾಯ್ದ ಗಂಡ

ಶುಕ್ರವಾರ, 19 ಜೂನ್ 2020 (21:25 IST)
ತನ್ನ ಪತ್ನಿಯ ಮೇಲೆ ಗೆಳೆಯ ಅತ್ಯಾಚಾರ ಮಾಡುತ್ತಿದ್ದರೆ ಗಂಡ ಬಾಗಿಲು ಕಾಯ್ದ ಘಟನೆ ನಡೆದಿದೆ.

ಪಾಪಿ ಪತಿ ಮಾರುಕಟ್ಟೆಗೆ ಅಂತ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ದಾರಿಯಲ್ಲಿ ಗೆಳೆಯ ಬಲ್ವಂತ್ ಧಾನಕ್ ನನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ.

ಯಾರೂ ಇಲ್ಲದ ಕರೆ ಬೈಕ್ ನಿಲ್ಲಿಸಿದ ವೇಳೆ ಗಂಡನ ಗೆಳೆಯ ಅಲ್ಲೇ ಸಮೀಪದಲ್ಲಿದ್ದ ರೂಮಿಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಗೆಳೆಯ ಅತ್ಯಾಚಾರ ನಡೆಸುತ್ತಿದ್ದರೆ ಗಂಡ ಬಾಗಿಲು ಕಾಯುತ್ತಿದ್ದ. ಸಂಚು ರೂಪಿಸಿ ನನ್ನ ಮೇಲೆ ಅತ್ಯಾಚಾರ ಮಾಡಿಸಿದ್ದಾನೆ ಎಂದು ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ