ಪಡಿತರ ಅಕ್ರಮ ಸಾಬೀತಾದರೆ ಕ್ರಿಮಿನಲ್ ಕೇಸ್

ಬುಧವಾರ, 17 ಜೂನ್ 2020 (18:17 IST)
ಪಡಿತರ ಆಹಾರಧಾನ್ಯ ಅಕ್ರಮವೆಸಗಿದರೆ ಅಂತಹ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದು.

ಹೀಗಂತ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು‌‌ ಗ್ರಾಹಕರ‌ ವ್ಯವಹಾರ ಖಾತೆ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದ್ದಾರೆ.

ಗುಲ್ಬರ್ಗದಲ್ಲಿ 2000 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಣೆ ಬಗ್ಗೆ ವರದಿಯಾಗಿತ್ತು. ತನಿಖೆ ನಂತರ ಅಕ್ರಮವೆಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ರಾಜ್ಯದಲ್ಲಿ ಅಕ್ರಮ ಪಡಿತರ ಸಾಗಣೆ ಕಂಡ ಕೂಡಲೇ ಆಯಾ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ಅಲ್ಲಿನ ಆಹಾರ ದಾಸ್ತಾನು ಗೊಡೌನ್ ಗಳನ್ನು ಪರಿಶೀಲನೆ ನಡೆಸಿ ಆಹಾರಧಾನ್ಯ ಸಾಗಣೆ ಕುರಿತು ಯಾವುದೇ ಸೂಕ್ತ ದಾಖಲೆ ಇಲ್ಲದ ಪಕ್ಷದಲ್ಲಿ ಅದನ್ನು ವಶಕ್ಕೆ ಪಡೆದು ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ