ಪ್ರಿಯತಮೆ ಪತಿ, ಮೈದುನನಿಂದ ಪ್ರಿಯಕರನ ಹತ್ಯೆ
ಕಲಬುರ್ಗಿ: ಪ್ರೇಯಸಿಯನ್ನು ಭೇಟಿ ಮಾಡಲು ಬಂದ ವ್ಯಕ್ತಿಯನ್ನು ಆಕೆಯ ಪತಿ ಮತ್ತು ಮೈದುನ ಸೇರಿ ಹತ್ಯೆ ಮಾಡಿರುವ ಘಟನೆ ಆಜಾದ್ ಪುರ್ ಬಡಾವಣೆಯಲ್ಲಿ ನಡೆದಿದೆ.
ನಿನ್ನೆ ಸಾಯಂಕಾಲ ಸಹ ಮಹಿಳೆಯ ಭೇಟಿಗಾಗಿ ಬಸವರಾಜ ಬಂದಿದ್ದು, ಈ ಬಗ್ಗೆ ಸುಳಿವು ಪಡೆದ ಮಹಿಳೆಯ ಪತಿ ಹಾಗೂ ಮೈದುನ ಸೇರಿ ರಾತ್ರಿ ಕಟ್ಟಿಗೆಯಿಂದ ಹೊಡೆದು ಆತನನ್ನು ಕೊಲೆ ಮಾಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.