ಫ್ರೈಡ್ ರೈಸ್ ನಲ್ಲಿ ವಿಷವಿಕ್ಕಿ ಹೆಂಡತಿ-ಮಕ್ಕಳನ್ನು ಕೊಂದ ಪಾಪಿ

ಗುರುವಾರ, 9 ಡಿಸೆಂಬರ್ 2021 (10:09 IST)
ಮಂಗಳೂರು: ಪತ್ನಿ ಜೊತೆಗೆ ಕಲಹದ ಬಳಿಕ ಪತಿಮಹಾಶಯ ವಿಷ ಹಾಕಿದ ಫ್ರೈಡ್ ರೈಸ್ ನೀಡಿ ಆಕೆ ಮತ್ತು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಪತಿ ಆರೋಪವಾಗಿತ್ತು. ಪಕ್ಕದ ಮನೆಯ ಇಸ್ಲಾಂ ಧರ್ಮದ ಮಹಿಳೆಯ ಪ್ರಭಾವದಿಂದ ಪತ್ನಿ ಮತಾಂತರಗೊಂಡಿದ್ದಾಳೆಂದು ಪತಿ ಸಿಟ್ಟಿಗೆದ್ದಿದ್ದ. ಅಕ್ಟೋಬರ್ ನಲ್ಲಿ ಪತ್ನಿ ಒಂದು ವಾರ ಕಾಲ ನಾಪತ್ತೆಯಾಗಿದ್ದಳು. ಈ ಸಂಬಂಧ ಪತಿ ಪೊಲೀಸರಿಗೆ ದೂರು ನೀಡಿದ್ದ. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು.

ಇದೇ ಸಿಟ್ಟಿನಲ್ಲಿ ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ಪತ್ನಿ ಹಾಗೂ 8 ಮತ್ತು 4 ವರ್ಷದ ಮಕ್ಕಳಿಗೆ ನೀಡಿದ್ದ ಪತಿ ಇಬ್ಬರನ್ನೂ ಕೊಂದಿದ್ದಲ್ಲದೆ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ ತಮ್ಮ ಸಾವಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಪಕ್ಕದ ಮನೆಯ ಮಹಿಳೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ