ಪತಿಯ ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ಹೀಗಾ ಮಾಡೋದು

ಬುಧವಾರ, 8 ಜುಲೈ 2020 (18:07 IST)
ಅವರಿಬ್ಬರ ಮದುವೆಯಾಗಿ ಐದಾರು ತಿಂಗಳೂ ಕಳೆದಿಲ್ಲ. ಆದರೆ ಪತಿಯ ವರದಕ್ಷಿಣೆ ದಾಹ ನವ ವಿವಾಹಿತೆ ಬಾಳಿಗೆ ಮುಳ್ಳಾಗಿದೆ.

ಪತಿ ಪ್ರವೀಣ ರೆಡ್ಡಿ ಎಂಬಾತನ ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ದಿವ್ಯಾ (23) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಮದುವೆ ವೇಳೆ ಪ್ರವೀಣ ರೆಡ್ಡಿ ಲಕ್ಷಾಂತರ ಹಣ, 20 ತೊಲ ಚಿನ್ನಾಭರಣ ಹಾಗೂ ಭೂಮಿ ಕೊಟ್ಟಿದ್ದರು.

ಇಷ್ಟಾದರೂ ತಮ್ಮ ಮಗಳಿಗೆ ಮತ್ತೆ ವರದಕ್ಷಿಣೆ ತರುವಂತೆ ಪ್ರವೀಣ ಹಾಗೂ ಆತನ ಮನೆಮಂದಿ ಒತ್ತಡ ಹಾಕಿ ನಿತ್ಯ ಜಗಳ ವಾಡುತ್ತಿದ್ದರು. ಇದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೃಹಿಣಿಯ ಪೋಷಕರು ದೂರು ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ