ಇನ್ನೂ ಋತುಮತಿಯಾಗಿಲ್ಲವೆಂದು 23 ವರ್ಷದ ವಿವಾಹಿತೆ ಮಾಡಿದ್ದೇನು ಗೊತ್ತಾ?

ಬುಧವಾರ, 8 ಜುಲೈ 2020 (10:13 IST)
Normal 0 false false false EN-US X-NONE X-NONE

ಕೂಡ್ಲಿಗಿ : ಸಾಮಾನ್ಯವಾಗಿ ಹೆಣ್ಣಮಕ್ಕಳು 12-13 ವರ್ಷದೊಳಗೆ ಋತುಮತಿಯಾಗುತ್ತಾರೆ. ಆದರೆ 23 ವರ್ಷದ ವಿವಾಹಿತೆ ತಾನು ಇನ್ನೂ ಋತುಮತಿಯಾಗಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ.
 

ವೀಣಾ (23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಗೆ 23 ವರ್ಷವಾದರೂ ಋತುಮತಿಯಾಗಲಿಲ್ಲ. ಆದರೂ ಮನೆಯವರು 2 ವರ್ಷಗಳ ಹಿಂದೆ ಮದುವೆ ಮಾಡಿಸಿದ್ದರು. ಋತುಮತಿಯಾಗದ ತಾನು ಸಾಂಸಾರಿಕ ಜೀವನ ಸಾಗಿಸಲು ಸಾಧ್ಯವಿಲ್ಲ ಎಂದು ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಳ ತಾಯಿಯ ದೂರಿದ ಆಧಾರದ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ,

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ