ಹೈ-ಕ ಅಭಿವೃದ್ಧಿಯ ಹಣ ಮಹಾರಾಷ್ಟ್ರದ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಬಳಕೆ..?
ಈ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕವೇ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ನೀಡಿರುವ ಅನುದಾನದ ಹಣ ವಿನಿಯೋಗವಾಗುತ್ತಿದೆ. ಈ ಹಿಂದೆ ಮಂಡಳಿಯ ಅಧ್ಯಕ್ಷರಾಗಿದ್ದ ಆದಿತ್ಯಾ ಆಮ್ಲಾನ್ ಬಿಸ್ವಾಸ್ ಅವಧಿಯಲ್ಲೇ ರಾಜ್ಯದ ಹಣ ಮಹಾರಾಷ್ಟ್ರ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ವಿನಿಯೋಗವಾಗಿದೆ ಎಂದು ಆರೋಪಿಸಲಾಗಿದೆ.