ಈ ಬಗ್ಗೆ ಮಾತನಾಡಿದ ಅವರು, ಜೂನ್ ನಲ್ಲಿ 4ರಾಜ್ಯಸಭಾ ಸ್ಥಾನಗಳು ಖಾಲಿಯಾಗುತ್ತದೆ. ಈ ಪೈಕಿ ಒಂದು ಸ್ಥಾನ ನೀಡುವಂತೆ ಬಿಜೆಪಿ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಸಚಿವ ಸ್ಥಾನಕ್ಕೆ ಬದಲಾಗಿ ರಾಜ್ಯಸಭಾ ಸ್ಥಾನ ಕೇಳುತ್ತಿಲ್ಲ. ಉಮೇಶ್ ಕತ್ತಿ ಬೇರೆ, ರಮೇಶ್ ಕತ್ತಿ ಬೇರೆ. ನಾವಿಬ್ಬರೂ ಸಹೋದರರು, ಆದರೆ ನಮ್ಮ ಜೀವನ ಬೇರೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನನಗೂ ಸಚಿವ ಸ್ಥಾನ ಸಿಗಬಹುದು. ಪ್ರತಿಬಾರಿಯೂ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತೆ. ಅಂತಿಮವಾಗುವ ವೇಳೆಗೆ ಪಟ್ಟಿಯಲ್ಲಿ ನನ್ನ ಹೆಸರು ಇರಲ್ಲ. ಬಿಜೆಪಿ ಹೈಕಮಾಂಡ್ ನಾಯಕರಿಗೆ ಇದೆಲ್ಲವೂ ಗೊತ್ತಿದೆ. ನಾನು ಇನ್ನೂ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವೆ. ನಾನು ಮಂತ್ರಿಯಾಗಬಹುದು ಸಿಎಂ ಸಹ ಆಗಬಹುದು ಎಂದು ಅವರು ತಿಳಿಸಿದ್ದಾರೆ.