ಅವರು ಕೇಳಿದಾಗ ನಾನು ಒಪ್ಪಬಾರದಿತ್ತು: ಟಿ.ಎನ್.ಸೀತಾರಾಂ

ಮಂಗಳವಾರ, 24 ಅಕ್ಟೋಬರ್ 2017 (14:43 IST)
ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಸಾಕ್ಷ್ಯಚಿತ್ರಕ್ಕೆ ಕೋಟಿ ರೂ. ಖರ್ಚು ಮಾಡುವ ಅಗತ್ಯವೇನಿತ್ತು ಎಂದು ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಪ್ರಾಜೆಕ್ಟ್ನಿಂದ ಹೊರಬರಲು ಟಿ.ಎನ್.ಸೀತಾರಾಂ ನಿರ್ಧರಿಸಿದ್ದಾರಂತೆ.

ಹೀಗಂತ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. `ಶಾಸನ ಸಭೆ ನಡೆದು ಬಂದ ದಾರಿ - 7 ಚಿತ್ರದ ಪೈಕಿ ಎರಡನ್ನು ಮುಗಿಸಿದ್ದೇನೆ. ಅವರಿಗೆ ಕೊಟ್ಟು ಕೈ ಮುಗಿದು ಬರುತ್ತೇನೆ. ಮಿಕ್ಕ 5 ಮಾಡಲಾರೆ. ಅವರು ಹಿಂದೆ ಹೇಳಿದಂತೆ ಪೂರ್ತಿ ಹಣ ಕೊಡುತ್ತೇನೆಂದರೂ ನನಗೆ ಬೇಡ. ಬೇರೆ ಯಾರಿಗಾದರೂ ಕೊಡಲಿ. ಯಾವುದೇ ಸರ್ಕಾರದ ಹಣ involve ಆದ ಕೆಲಸಗಳ ಸಹವಾಸ ಬೇಡ. ಅವರು ಕರೆದಾಗ ನಾನು ಒಪ್ಪಬಾರದಿತ್ತು. ಒಳ್ಳೆಯ product ಮಾಡಲು ಹೋಗಿ ತೀವ್ರ ಅವಮಾನ ಮತ್ತು ನೋವು ಅನುಭವಿಸಿದೆ. ಈ ಸಮಯದಲ್ಲಿ ನನಗೆ ಮಾನಸಿಕ ಸ್ಥೈರ್ಯ ಕೊಟ್ಟ ಎಲ್ಲರಿಗೆ ಕೃತಜ್ಞ’ ಎಂದು ಬರೆದುಕೊಂಡಿದ್ದಾರೆ.

ಸೀತಾರಾಂ ಸಾಕ್ಷ್ಯಚಿತ್ರ ಮಾಡುವ ಸಲುವಾಗಿ, `ಡ್ರಾಮಾ ಜ್ಯೂನಿಯರ್ಸ್' ಸೀಸನ್ 2ರಿಂದ ಹೊರಬಂದಿದ್ದರು. ಅವರ ಸಿನಿಮಾ `ಕಾಫಿತೋಟ’ ಅಮೆರಿದಲ್ಲಿ ಪ್ರದರ್ಶನವಾದಾಗಲೂ ಅಲ್ಲಿಗೆ ಹೋಗದೆ ಸಾಕ್ಷ್ಯಚಿತ್ರದಲ್ಲಿ ಬ್ಯುಸಿಯಾಗಿದ್ದರು ಎನ್ನಲಾಗಿದೆ. ಈಗ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದು, ಪ್ರಾಜೆಕ್ಟ್ ನಿಂದ ಹೊರಬರುವುದಕ್ಕೆ ನಿರ್ಧರಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ