ನಾನು ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ. ಹಾಗಾಗಿ ನಾಳೆಯೂ ಹುಟ್ಟುಹಬ್ಬದ ಆಚರಣೆ ಮಾಡುವುದಿಲ್ಲ. ನಮ್ಮ ಸರ್ಕಾರಕ್ಕೆ ಆರು ತಿಂಗಳು ಆಗಿರುವುದರ ಬಗ್ಗೆ ಒಂದು ಪುಸ್ತಕವನ್ನು ಬಿಡುಗಡೆ ಮಾಡುತ್ತೇವೆ. ಏನೆಲ್ಲಾ ಕೆಲಸ ಆರು ತಿಂಗಳಲ್ಲಿ ಆಗಿದೆ. ಅವು ಯಾವ ರೀತಿ ಜನೋಪಯೋಗಿ ಆಗಿವೆ ಎನ್ನುವ ಬಗ್ಗೆ ಪಕ್ಷಿನೋಟವನ್ನು ಒಳಗೊಂಡ ಹೊತ್ತಿಗೆಯನ್ನು ಹೊರ ತರಲಿದ್ದೇವೆ ಎಂದರು.
ಜೋಳ ಖರೀದಿ ಬಗ್ಗೆ ಎಲ್ಲ ರೈತರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ಬಂತು. ಅದಕ್ಕೆ ಅವಕಾಶ ಮಾಡಿ ಆದೇಶ ಹೊರಡಿಸಿದ್ದೇವೆ. ಈಗ ರಾಗಿ ಖರೀದಿ ಮುಂದುವರಿಸಬೇಕು ಎನ್ನುವ ಬೇಡಿಕೆ ಬಂದಿದೆ. ಅದಕ್ಕೆ ಕೂಡ ಸಂಪುಟ ಉಪಸಮಿತಿ ಇದೆ. ಸಭೆಯಲ್ಲಿ ಅನುಮತಿ ಪಡೆದು ರೈತರಿಗೆ ಅನುಕೂಲ ಆಗುವ ರೀತಿ ಮಾಡುತ್ತೇವೆ ಎಂದರು.
ಹೀಗೆ ಯಾವ ಯಾವ ಸಮಸ್ಯೆಗಳು ಬಂದಿವೆಯೋ ಆಗ ನಮ್ಮ ಸರ್ಕಾರ ಸ್ಪಂದನೆ ಮಾಡಿದೆ. ಅದಕ್ಕೆ ಆರು ತಿಂಗಳು, 100 ದಿನ ಎನ್ನುವ ಕಾಲಮಿತಿಯಿಲ್ಲ. ನಿರಂತರವಾಗಿ ಜನರಿಗೆ ಸಹಾಯ ಮಾಡುವ, ಜನಕಲ್ಯಾಣ ಮಾಡುವ ಸರ್ಕಾರ ನಮ್ಮದು ಎಂದು ಸಿಎಂ ಸಮರ್ಥಿಸಿಕೊಂಡರು.