ಕಾವೇರಿ ಬೇಡ, ಕೃಷ್ಣೆಯೂ ಬೇಡ, ನಮ್ದೆ ನಮಗಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಗೊಣಗಿ ಹೊರಟು ಹೋದ ಘಟನೆ ನಡೆದಿದೆ.
ಹಿಂದ ಸಭೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಆರೆಸ್ಸೆಸ್ ನಾಯಕರು, ನಮ್ಮ ಬಳಿ ಈ ವಿಚಾರಗಳನ್ನು ತರಬೇಡಿ, ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ನಿಮ್ಮ ಅಸಮಾಧಾನವನ್ನು ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.
ಅಕ್ಟೋಬರ್ 3 ರಂದು ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಸಾಧ್ಯತೆಯಿದೆ ಎನ್ನಲಾಗಿದೆ.
ಸಭೆಯ ಬಳಿಕ ಕೇಶವಕೃಪದಿಂದ ಹೊರಬಂದ ಈಶ್ವರಪ್ಪ ಮುಖದಲ್ಲಿ ನಿರಾಶಾಭಾವ ಎದ್ದುಕಾಣುತ್ತಿತ್ತು. ಸಭೆ ಮುಗಿಸಿ ಹೊರಬಂದ ಈಶ್ವರಪ್ಪ ಕಾವೇರಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.