ಲೋಕಸಭೆ ಚುನಾವಣೆ ಸಿದ್ದತೆ ಕುರಿತು ಚರ್ಚೆ ಮಾಡಿದ್ದೇನೆ- ಆರ್ ಅಶೋಕ್

ಶನಿವಾರ, 18 ನವೆಂಬರ್ 2023 (18:41 IST)
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯ ನಂತರ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು,ಆತ್ಮಿಯ ಗೆಳೆಯ ಮಾಜಿ ಸಿಎಂ ಬೊಮ್ಮಾಯಿ ಜೊತೆ ಒಂದು ಗಂಟೆ ಪಕ್ಷದ ಸಂಘಟನೆ ನಡೆಸಲಿದ್ದಾರೆ.ಬೆಳಗಾವಿ ಅಧಿವೇಶದಲ್ಲಿ ನಮ್ಮ ನಿಲುವು ಲೋಕಸಭೆ ಚುನಾವಣೆ ಸಿದ್ದತೆ ಕುರಿತು ಚರ್ಚೆ ಮಾಡಿದ್ದೇನೆ.ಇನ್ನೇರಡು ದಿನದಲ್ಲಿ ಕೋರ್ ಕಮಿಟಿ ರಚನೆ ಮಾಡಿ,ಅಧಿವೇಶನದಲ್ಲಿ ಚರ್ಚಿಸುವ ಕುರಿತು ಸಭೆ ಮಾಡಲಾಗುವುದು.ಕಾವೇರಿ ಹೊರಾಟದಲ್ಲಿ ಜನರಿಗೆ ಮಾಡಿದ ಮೊಸ, ಬರಗಾಲದಲ್ಲಿ ಮಂತ್ರಿಗಳು ಬೆಂಗಳೂರಲ್ಲಿ ಟಿಕಾನಿ ಹೂಡಿರುವುದು‌.ಡಿಕೆಶಿ ಸಿದ್ದರಾಮಯ್ಯ ಟೀಮ್ ಮಾಡಿಕೊಂಡು ಸಭೆ ಮಾಡುತ್ತಿರುವುದು.ಟ್ರಾನ್ಸ್ ಫರ್ ದಂಧೆಯಲ್ಲಿ ತೊಡಗಿದ್ದು 60% ಪರ್ಸೆಂಟ್ ಸರ್ಕಾರ ಅಂತ ಜನರು ಹೇಳುತ್ತಿದ್ದಾರೆ.
 
ಶಾಸಕರಿಗೆ ಅನುದಾನ ನೀಡುತ್ತಿಲ್ಲ ಅವರು ಜನರ ಬಳಿ ಹೋಗುತ್ತಿಲ್ಲ.ಫ್ರಿ ಹೆಸರಿನಲ್ಲಿ ಹಣ ನೀಡುತ್ತಿರುವುದಾಗಿ ಹೇಳಿದ್ದಾರೆ‌ ಆದರೆ ಆ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ.ಎಲ್ಲ ಹಣ ಪಂಚರಾಜ್ಯ ಚುನಾವಣೆ ಗೆ ಹೋಗುತ್ತಿದೆ.ಅವರ ಸರ್ಕಾರವನ್ನು ಕೆಡವೊಕೆ ನಾನ್ಯಾರು ಅವರ್ಯಾರು ಮುಖ್ಯವಲ್ಲ.ಹಿಂದೆ ಅವರ ಸರ್ಕಾರ ಹೇಗೆ ಬಿದ್ದು ಹೊಯಿತು ಅಂತ ಅವರಿಗೆ ಗೊತ್ತಿದೆ.ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ನಾವ್ಯಾಕೆ ಬೀಳಿಸಲ್ಲ‌.

ಏನೂ ಇಲ್ಲ ಅಂದರೆ ಪರಮೇಶ್ವರ ತಮ್ಮ ಮನೆಯಲ್ಲಿ ಯಾಕೆ ಸಭೆ ಮಾಡಿದರು.ಪಕ್ಕದ ಮನೆಯಲ್ಲಿರುವ ಡಿಕೆಶಿ ಅವರನ್ನು ದೂರ ಇಟ್ಟು ಸಭೆ ಮಾಡಿದ್ದೇಕೆ.ಜಮಿರ್ ಹೇಳಿಕೆ ಕುರಿತು ಅಧಿವೇಶನದಲ್ಲಿ ಮಾತನಾಡುತ್ತೇವೆ‌. ಅವರದು ಸಂವಿಧಾನ ವಿರೋಧಿ ನಡೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಹೈಕಮಾಂಡ್ ಸೂಚನೆ ನೀಡಿದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ.ಉತ್ತರ ದಕ್ಷಿಣ ಕರ್ನಾಟಕ ಅಂತ ಇಲ್ಲ. ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ.ಎಲ್ಲರೂ ಸೇರಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ‌ ಎಂದು ಆರ್ ಅಶೋಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ