ಮೊದಲು ಬೆಂಕಿ ಹಾಕಿದವರ ಮಾಹಿತಿ ನನಗಿದೆ: ಸಚಿವ ಚಲುವರಾಯಸ್ವಾಮಿ

Sampriya

ಶನಿವಾರ, 14 ಸೆಪ್ಟಂಬರ್ 2024 (16:49 IST)
Photo Courtesy X
ಮಂಡ್ಯ: ಕಾನೂನಿನ ಪ್ರಕಾರ ನಷ್ಟ ಪರಿಹಾರ ನೀಡಲು ಅವಕಾಶವಿಲ್ಲ. ಆದರೆ ನಾಗಮಂಗಲ ಗಲಭೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದು, ಪರಿಹಾರ ಕೊಡಿಸಲು ಒಪ್ಪಿಕೊಂಡಿದ್ದಾರೆ. ನಷ್ಟ ಪ್ರಮಾಣದ ವರದಿ ಬಂದ ನಂತರ ಸರ್ಕಾರದಿಂದ ಪರಿಹಾರ ಕೊಡಿಸುವ ಜತೆಗೆ ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಚಲುವರಾಯಸ್ವಾಮಿ ಹೇಳಿದರು.

ಇಂದು ನಾಗಮಂಗಲದಲ್ಲಿ ಶಾಂತಿಸಭೆ ನಡೆಸಲು ಬಂದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಈ ಗಲಭೆಗೆ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ. ಹೊರಗಡೆಯವರು ಏನೇ ಬೇಕಾದ್ರು ಹೇಳಲಿ, ನನಗೆ ನಾಗಮಂಗಲ ಜನರು ಬೇಕು. ಯಾರು ಮೊದಲು ಬೆಂಕಿ ಹಾಕಿದ್ರು? ಎಂಬ ಮಾಹಿತಿ ಇದೆ.

ಇಂತಹ ಸಂದರ್ಭದಲ್ಲಿ ಪಕ್ಷ ಮತ್ತು ಸಮುದಾಯದ ಬಗ್ಗೆ ಮಾತನಾಡಲ್ಲ. ನನಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಅಗತ್ಯಬಿದ್ದರೆ ವಿಶೇಷ ತನಿಖೆಯನ್ನೂ ಮಾಡಿಸೋಣ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ