ಶ್ರೀಗಳ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ : ಈಶ್ವರಪ್ಪ
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮುರುಘಾ ಶ್ರೀ ಬಂಧನ ವಿಚಾರವಾಗಿ ಮಾತನಾಡಿದ ಅವರು, ಮಠದ ಸ್ವಾಮಿಗಳು ಅಂದರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ.
ತನಿಖೆ ನಡೆಯುತ್ತಿದೆ ಸತ್ಯವೋ ಸುಳ್ಳೋ ಹೊರಗೆ ಬರಲಿ. ಮಠ, ಮಂದಿರ, ಭಕ್ತಿ, ಜಾಗೃತಿ ಉಂಟು ಮಾಡುತ್ತದೆ ಎಂದಿದ್ದಾರೆ.
ಇದೇ ವೇಳೆ ರಾಜ್ಯಕ್ಕೆ ಮೋದಿ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಇಂತಹ ಐವತ್ತು ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಬಿಜೆಪಿಗೆ ಜನ ಬೆಂಬಲ ಕೊಡುತ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ.