ಮುರುಘಾ ಶ್ರೀಗಳ ಬಂಧನ... ಹೆಚ್ಚಿದ ವಿವಾದ..!!!

ಶುಕ್ರವಾರ, 2 ಸೆಪ್ಟಂಬರ್ 2022 (16:35 IST)
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ಮೂಲಕ ಆಗಸ್ಟ್ 26ರಂದು ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಒಡನಾಡಿ ಸಂಸ್ಥೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಸಂಸ್ಥೆಯಾಗಿದೆ. ಬಳಿಕ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿದೆ. ಶ್ರೀಗಳ ಬಂಧನಕ್ಕೆ ಒತ್ತಡ ಹೆಚ್ಚಾದ ಬೆನ್ನಲ್ಲೆ ಪ್ರಕರಣ ದಾಖಲಾಗಿ ಆರು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ.
 
ಮೈಸೂರು ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಮಾತನಾಡಿ, 'ಶಿವಮೂರ್ತಿ ಶ್ರೀ ಕಾವಿ ಹಾಕಿರುವ ಬೆಕ್ಕು. ಮುರುಘಾ ಅಲ್ಲ ಅವರೊಂದು ಮೃಗ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತರಲ್ಲಿ ದಲಿತ ಮಕ್ಕಳಿದ್ದಾರೆ. ಮಠದಲ್ಲಿ ಇಂತಹ ಹೀನಾಯ ಸ್ಥಿತಿಯನ್ನು ಬಹಳಷ್ಟು ಮಕ್ಕಳು ಅನುಭವಿಸಿದ್ದಾರೆ. ಈ ಕಿರಾತಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ಮೇಲೆ ಹತ್ತು ಹದಿನೈದು ವರ್ಷದಿಂದ ದೌರ್ಜನ್ಯ ನಡೆದಿದೆ. ಅದೆಲ್ಲವೂ ಹೊರಬರಬೇಕು. ಅಲ್ಲಿವರೆಗೂ ನಮಗೆ ಸಮಾಧಾನವಿಲ್ಲ' ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ