ಸಂಪುಟದಿಂದ ಕೈಬಿಟ್ಟರೂ, ಬಿಡದಿದ್ದರೂ ಸಂತೋಷ: ಅಂಬರೀಶ್

ಶುಕ್ರವಾರ, 17 ಜೂನ್ 2016 (15:41 IST)
ನನ್ನನ್ನು ಸಚಿವನಾಗಿ ಮಾಡಿ ಎಂದು ಕೇಳಿರಲಿಲ್ಲ ಹೀಗಾಗಿ ಸಂಪುಟದಿಂದ ಕೈಬಿಟ್ಟರೂ ಬಿಡದಿದ್ದರೂ ಸಂತೋಷ ಎಂದು ವಸತಿ ಖಾತೆ ಸಚಿವ ಅಂಬರೀಶ್ ಹೇಳಿದ್ದಾರೆ.
 
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಯಲ್ಲಿ ಕೆಲವರನ್ನು ಕೈಬಿಡಲಾಗುವುದು. ಕೆಲವರ ಖಾತೆ ಬದಲಾವಣೆ ಮಾಡಲಾಗುವುದು ಎನ್ನುವ ಉಹಾಪೋಹದ ವರದಿಗಳು ಹರಡಿವೆ. ಆದರೆ, ಸತ್ಯ ಸಂಗತಿ ಸಿಎಂ ಸಿದ್ದರಾಮಯ್ಯ ನಗರಕ್ಕೆ ವಾಪಸ್ ಆದ ನಂತರ ತಿಳಿಯಲಿದೆ ಎಂದರು.
 
ಯಾರನ್ನಾದರೂ ಶಿಕ್ಷಿಸಬೇಕು ಎಂದರೆ ಅವರು ತಪ್ಪು ಮಾಡಿರಬೇಕು. ತಪ್ಪು ಮಾಡಿದಾಗ ಶಿಕ್ಷಿಸಬೇಕು. ನನ್ನಲ್ಲಿ ಪಿನ್ ಪಾಯಿಂಟ್ ತಪ್ಪು ಕಂಡುಹಿಡಿಯಲು ಆಗುವುದಿಲ್ಲ. ಸಚಿವನಾಗಿ ಮೂರು ವರ್ಷದ ಸಾಧನೆಯನ್ನು ಜನತೆ ಹೇಳಬೇಕಾಗಿದೆ. ನಾನೇ ಹೇಳುವುದು ಸಾಧನೆಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 
 
ಮಂತ್ರಿ ಪರಿಷತ್ ಸಭೆ ಅಂದ್ರೆನೆ ಸಿಕ್ರೇಟ್, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಪರೋಕ್ಷವಾಗಿ ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಡಲಾಗುತ್ತದೆ ಎನ್ನುವ ಮಾಹಿತಿ ನೀಡಿದರು. ಸಚಿವರನ್ನಾಗಿ ಮಾಡಿದವರು ಆವರೇ, ಸಚಿವ ಸ್ಥಾನದಿಂದ ಕೈಬಿಡುವವರು ಅವರೇ. ಸಂಪುಟದಿಂದ ಕೈಬಿಟ್ಟರೂ, ಬಿಡದಿದ್ದರೂ ಸಂತೋಷ ಎಂದು ವಸತಿ ಖಾತೆ ಸಚಿವ ಅಂಬರೀಶ್ ತಿಳಿಸಿದ್ದಾರೆ.   

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ