ಸಚಿವ ಪದವಿ ಕೊಟ್ಟರೆ ನಿಭಾಯಿಸುವೆ: ಕೆ.ಶ್ರೀನಿವಾಸಗೌಡ

ಶನಿವಾರ, 26 ಮೇ 2018 (17:09 IST)
ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಪದವಿ ಕೊಟ್ಟಲ್ಲಿ ಪಕ್ಷದ ಘನತೆಗೆ ತಕ್ಕಂತೆ ನಿಭಾಯಿಸುತ್ತೇನೆ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸ್‌ಗೌಡ ಹೇಳಿದ್ದಾರೆ. 
 ಫಲಿತಾಂಶದ ನಂತರ ಪ್ರಥಮ ಬಾರಿಗೆ ಕೋಲಾರಕ್ಕೆ ಆಗಮಿಸಿದ ಕೆ.ಶ್ರೀನಿವಾಸಗೌಡಗೆ  ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಂತ್ರ ಕೋಲಾರದ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಕೆ.ಶ್ರೀನಿವಾಸಗೌಡ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀಕ್ವಾದ
 
 ನನಗೆ ಉನ್ನತ ಅಧಿಕಾರಕ್ಕಿಂತ ಪಕ್ಷದ ವರಿಷ್ಟರ ಆದೇಶ ಮುಖ್ಯ. ರೆಸಾರ್ಟ್ ನಲ್ಲಿ ಸ್ವತಂತ್ರವಾಗಿದ್ದೆವೆ ಹೊರತು ಬಂಧಿಯಾಗಿರಲಿಲ್ಲ. ಪಕ್ಷದ ಉಳಿವಿಗಾಗಿ ಜೆಡಿಎಸ್ ಶಾಸಕರು ಜೊತೆಯಾಗಿದ್ದೆವು ಎಂದು ತಿಳಿಸಿದ್ದಾರೆ.
 
 ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮ ಹಾಕುವೆ.  ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳು ಜೆಡಿಎಸ್ ವಶಕ್ಕೆ ಬರುವಂತೆ ಪಕ್ಷ ಕಟ್ಟಲಾಗುವುದು ಎಂದು ಜೆಡಿಎಸ್ ಶಾಸಕ  ಕೆ.ಶ್ರೀನಿವಾಸ್‌ಗೌಡ  ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ