ವಿಚಾರಣೆಗೆ IAS ಅಧಿಕಾರಿಗಳು ಹಿಂದೇಟು
ಮತದಾರರ ಮಾಹಿತಿಯನ್ನು ಅಕ್ರಮವಾಗಿ ಕಲೆ ಹಾಕಿದೆ ಎಂದು ಚಿಲುಮೆ ಸಂಸ್ಥೆ ಮೇಲೆ ಕೇಸ್ ದಾಖಲಾಗಿದೆ. ಆದರೆ IAS ಅಧಿಕಾರಿಗಳು ವಿಚಾರಣೆಗೆ ಹಾಜರಾಗದೇ ಕಳ್ಳಾಟ ಮಾಡ್ತಿದ್ದಾರೆ. ನೋಟಿಸ್ ಜಾರಿ ಮಾಡಿದ್ರೂ ಸಹ ವಿಚಾರಣೆಗೆ ಹಾಜರಾಗಲು ಮೀನಾಮೇಷ ಎಣಿಸುತ್ತಿದ್ದಾರೆ. ಪ್ರಕರಣದಲ್ಲಿ ಇಬ್ಬರು IAS ಅಧಿಕಾರಿಗಳಾದ ರಂಗಪ್ಪ, ಬೆಂಗಳೂರು DC ಶ್ರೀನಿವಾಸ್ ಸಸ್ಪೆಂಡ್ ಆಗಿದ್ದಾರೆ. ರಂಗಪ್ಪ, BBMP ವಿಶೇಷ ಆಯುಕ್ತರಾಗಿದ್ರು. ಇಬ್ಬರೂ ಸಹ ಬೆಂಗಳೂರು ಕೇಂದ್ರ, ಬೆಂಗಳೂರು ನಗರದ ಚುನಾವಣಾಧಿಕಾರಿಯಾಗಿದ್ರು. ಆದ್ದರಿಂದ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಸಸ್ಪೆಂಡ್ ಮಾಡಲಾಗಿದೆ. ಇವರನ್ನು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ರು ಸಹ ಕಾರಣವಿಲ್ಲದೆ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಹಿರಿಯ ಅಧಿಕಾರಿಗಳ ನಡೆ ಬಹಳ ಅನುಮಾನ ಹುಟ್ಟುಹಾಕಿದೆ.