ರಾಜ್ಯದಲ್ಲಿ ನಂದಿನಿ ಅಮುಲ್ ಜಟಾಪಟಿ ಜೋರಾಗಿದೆ. BJP ಸರ್ಕಾರ ನಂದಿನಿಯನ್ನು ದಮನ ಮಾಡ್ತಿದೆ. ಅಮುಲ್ಗೆ ಸ್ವಾಗತ ಮಾಡ್ತಿದೆ ಎಂದು ಕಾಂಗ್ರೆಸ್, JDS ಕಿಡಿಕಾರಿದ್ವು. ಈ ಜಟಾಪಟಿ ಮುಂದುವರಿಯುತ್ತಿದ್ದು, ಇದೀಗ ಕಾಂಗ್ರೆಸ್ ನಾನು ಅಧಿಕಾರಕ್ಕೆ ಬಂದ್ರೆ KMF ಸಂಸ್ಥೆಯ ಉನ್ನತೀಕರಣಕ್ಕೆ ಆದ್ಯತೆ ನೀಡ್ತೀವಿ ಎಂದಿದ್ದಾರೆ.. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದ ರೈತರಿಗೆ ಹೈನುಗಾರಿಕೆ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸುತ್ತದೆ. "ನಂದಿನಿ" ಬ್ರಾಂಡ್‌ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ತೇವೆ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ನಂದಿನಿಯನ್ನು ಗುಜರಾತಿನ ಹಿತಾಸಕ್ತಿಗೆ ಬಲಿ ಕೊಡುವುದನ್ನು ಶತಾಯಗತಾಯ ತಡೆಯುತ್ತೇವೆ ಎಂದು ಭರವಸೆ ನೀಡಿದ್ದಾರೆ.