ಅಕ್ಕಿ ಬದಲು ಹಣ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ಭರ್ಜರಿ ಉಳಿತಾಯ ಆಗುತ್ತಾ?

ಭಾನುವಾರ, 2 ಜುಲೈ 2023 (09:08 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅದರಲ್ಲೂ ಸಿಎಂ ಸಿದ್ದರಾಮಯ್ಯನವರ ಕನಸಿ ಯೋಜನೆಯಾದ ಅನ್ನಭಾಗ್ಯ ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
 
ಐದು ಕೆಜಿ ಅಕ್ಕಿ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿ ಬದಲು 170 ರೂಪಾಯಿ ಬಿಪಿಎಲ್ ಕಾರ್ಡ್ದಾರರಿಗೆ ಸಿಗಲಿದೆ. ಹತ್ತು ಕೆ.ಜಿ ಅಕ್ಕಿ ಕೊಡಬೇಕಿತ್ತು. ಆದ್ರೆ, ಅಕ್ಕಿ ದಾಸ್ತುನು ಕೊರತೆ ಇರುವುದರಿಂದ ಐದು ಕೆಜೆ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಷಯ ಅಂದ್ರೆ ಇವತ್ತೇ ಬಿಪಿಎಲ್ ಕಾರ್ಡ್ದಾರರ ಅಕೌಂಟ್ಗೆ ಅಕ್ಕಿ ಹಣ ಜಮೆ ಆಗಲಿದೆ ಎಂದು ಜನ ಅಂದುಕೊಂಡಿದ್ರು. ಆದ್ರೆ ಇದಕ್ಕೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಜುಲೈ 10 ರಿಂದ ಹಣ ಜಮೆ ಪ್ರಕ್ರಿಯೆ ಶುರುವಾಗುತ್ತೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ