ರಾಜ್ಯ ಸರ್ಕಾರದ ‌ಎರಡನೇ‌ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರಿ ಯಶಸ್ಸು

ಭಾನುವಾರ, 25 ಜೂನ್ 2023 (19:48 IST)
ಗೃಹಜ್ಯೋತಿ ಯೋಜನೆಗೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಪ್ರತಿ ಮನೆಗೆ ೨೦೦ ಯೂನಿಟ್ ‌ಫ್ರೀ ಕರೆಂಟ್ ‌ನೀಡುವ ಗೃಹಜ್ಯೋತಿ ಯೋಜನೆ  ಇದಾಗಿದ್ದು,ಕಳೆದ‌ ಏಳು ದಿನಗಳ ಹಿಂದೆ ಆರಂಭ ಆಗಿದ್ದ ಗೃಹಜ್ಯೋತಿ  ಅರ್ಜಿಯನ್ನ ಸೇವಾ ಸಿಂಧು ಪೊರ್ಟಲ್ ಮೂಲಕ ‌ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ.ಮೊಬೈಲ್ ಲ್ಯಾಪ್‌ಟಾಪ್ ಕಂಪ್ಯೂಟರ್ ನಲ್ಲೂ ಸಹ ಅರ್ಜಿ ಸಲ್ಲಿಕ್ಕೆ ಅವಕಾಶ  ಇದೆ.ಕಳೆದ ಭಾನುವಾರದಿಂದ‌ ಆರಂಭ ‌ಆಗಿದ್ದ ಅರ್ಜಿ ಸಲ್ಲಿಕ್ಕೆ‌ಗೆ ಭಾನುವಾರದಿಂದ‌ ಸರ್ವರ್ ‌ಸಮಸ್ಯೆ ಗ್ರಾಹಕರು ಎದುರಿಸಿದ್ದಾರೆ.
 
ಆದರೆ ಕಳೆದ ಎರಡು ದಿನಗಳ ಹಿಂದೆ  ಸರ್ವರ್ ಸಮಸ್ಯೆಗೆ ಇಂಧನ ಇಲಾಖೆ ಮುಕ್ತಿ ಹಾಡಿದೆ.ಸರ್ವರ್ ಸಮಸ್ಯೆ ಆಗಿದ್ದರಿಂದ ‌ ಇಂಧನ ಇಲಾಖೆ‌ ಇಂದ ಹೊಸ‌ ಲಿಂಕ್ ‌ನೀಡಿದ್ದಾಗಿಂದ ‌ರಾಕೆಟ್ ವೇಗದಲ್ಲಿ ಸರ್ವರ್  ವರ್ಕ್ ‌ಆಗುತ್ತಿದೆ. ಪ್ರತಿ ‌ಒಂದು‌‌‌ ನಿಮಿಷಕ್ಕೆ ‌ಒಂದು ಅರ್ಜಿ ಸ್ವೀಕಾರವಾಗ್ತಿದೆ.ಏಳು ‌ದಿನಗಳಲ್ಲಿ ಒಟ್ಟು 45.61.662 ಅರ್ಜಿ ಸಲ್ಲಿಕ್ಕೆಯಾಗಿದೆ.ಗುರುವಾರ ‌ಒಂದೇ‌ ದಿನ‌ 8.91.820‌‌ ಗ್ರಾಹಕರಿಂದ‌ ಅರ್ಜಿ ಸಲ್ಲಿಕ್ಕೆ ‌ಮಾಡಿದ್ದಾರೆ.ಅದೇ ರೀತಿ ‌ಶುಕ್ರವಾರ 8.94.520 ಗ್ರಾಹಕರಿಂದ‌ ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ. ನಿನ್ನೆ ‍ಒಂದೇ ದಿನ 10.93 606 ಅರ್ಜಿ ಸಲ್ಲಿಕ್ಕೆ‌ ಮಾಡಿದ್ದಾರೆ.ನಿನ್ನೆ ದಾಖಲೆ ‌ಮಟ್ಟದಲ್ಲಿ‌ ಅರ್ಜಿ‌ ಸಲ್ಲಿಕ್ಕೆಯಾಗಿದೆ
 
ಇಂದು ಅರ್ದ ಕೋಟಿ ‌ಗಡಿ  ಅರ್ಜಿ ಸಲ್ಲಿಕ್ಕೆ ದಾಟಲಿದೆ.ಇಂದು ಇನ್ನು ಹೆಚ್ಚಿನ‌‌ ಸಂಖ್ಯೆಯಲ್ಲಿ ‌ಅರ್ಜಿ ಸಲ್ಲಿಕ್ಕೆ ಸಾದ್ಯತೆ ‌ಇದೆ.ಆದರೆ‌ ಇಂಧನ ಇಲಾಖೆ‌ ಇಂದ‌ ಯಾವುದೇ ರೀತಿಯ ಕೊನೆಯ ದಿನಾಂಕ ‌ಘೋಷಣೆ ಮಾಡಿಲ್ಲ.ದಿನಾಂಕ ‌ಘೋಷಣೆ‌ ಮಾಡದೆಯೇ ನಿರೀಕ್ಷೆಗೂ ಮಿರಿದ‌ ಜನರ‌ ರೆಸ್ಪಾನ್ಸ್  ಸಿಕ್ಲಿದೆ.ಇಂದು ೧೨ ಲಕ್ಷ‌ಕ್ಕೂ ಹೆಚ್ಚು ಅರ್ಜಿ ಸಲ್ಲಿಕ್ಕೆ ಸಾದ್ಯತೆ ಇದೆ.ಆದರೆ‌ ನಿನ್ನೆ ನಗರದ ಎಲ್ಲಾ‌ ಬೆಂಗಳೂರು ಒನ್‌ ಕೇಂದ್ರಗಳು ಖಾಲಿ ಖಾಲಿ ಇತ್ತು.ಸರ್ವರ್‌ ಸ್ಪೀಡ್ ‌ಇದ್ದ‌ ಕಾರಣ ಯಾವುದೇ ರೀತಿಯ ಸರತಿ ಸಾಲು ಇರಲಿಲ್ಲ.ಅರ್ಜಿ ಸಲ್ಲಿಕ್ಕೆ‌ ಬೇಗಾ ಆಗಿದ್ದರಿಂದ ಯಾವುದೇ ರೀತಿಯ ಕ್ಯೂ ‌ಇರಲಿಲ್ಲ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ