ರಾಹುಲ್ ಪಿಎಂ ಆಗಿದ್ದರೆ ನಮ್ಮ ದೇಶ ದಿವಾಳಿ ಆಗುತ್ತಿತ್ತು : ವಿಜಯೇಂದ್ರ

ಸೋಮವಾರ, 8 ಮೇ 2023 (12:34 IST)
ಶಿವಮೊಗ್ಗ : ಕೋವಿಡ್ ಸಮಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ಪಾಕಿಸ್ತಾನ, ಶ್ರೀಲಂಕಾಕ್ಕಿಂತ ನಮ್ಮ ದೇಶ ಮೊದಲು ದಿವಾಳಿ ಆಗುತ್ತಿತ್ತು ಎಂದು ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ತಿಳಿಸಿದರು.
 
ಪ್ರಚಾರದ ವೇಳೆ ಮಾತನಾಡಿದ ಅವರು, 50-60 ವರ್ಷಗಳ ಕಾಲ ಕಾಂಗ್ರೆಸ್ ದೇಶವನ್ನು, ರಾಜ್ಯವನ್ನು ಆಳಿದೆ. ಮೋದಿ ಪ್ರಧಾನಿಯಾದ ಬಳಿಕ ದೇಶದ ದಿಕ್ಕನ್ನು ಬದಲಾಯಿಸಿದ್ದಾರೆ. ಕೋವಿಡ್ ಸಮಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ಪಾಕಿಸ್ತಾನ, ಶ್ರೀಲಂಕಾಕ್ಕಿಂತ ನಮ್ಮ ದೇಶ ಮೊದಲು ದಿವಾಳಿ ಆಗುತಿತ್ತು ಎಂದು ವ್ಯಂಗ್ಯವಾಡಿದರು.

ರಾಜ್ಯದ ಭವಿಷ್ಯ ರೂಪಿಸುವ ಚುನಾವಣೆ ಇದಾಗಿದೆ. ಅಭಿವೃದ್ಧಿ ರಥ ತೆಗೆದುಕೊಂಡು ಹೋಗುವ ಮಹಾ ಚುನಾವಣೆಯಾಗಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದ ಪಾತ್ರ ಮಹತ್ವವಾದುದ್ದಾಗಿದೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ. ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುವ ಮೂಲಕ ಅಭಿವೃದ್ಧಿಗೆ ಮುಂಚೂಣಿಗೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ