ಮಾರ್ಚ್ 1ರಿಂದ 3ರವರೆಗೆ ಬೆಂಗಳೂರು ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮಾರ್ಚ್ 3ರಿಂದ ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣ, ನಾಯಂಡಹಳ್ಳಿ, ಕತ್ರಿಗುಪ್ಪೆ, ಕದಿರೇನಹಳ್ಳಿ, ಬನಶಂಕರಿ ದೇಗುಲ, ಜಯದೇವ ಆಸ್ಪತ್ರೆ, ಹೊಸೂರು ರಸ್ತೆ, ಇನ್ ಫ್ಯಾಂಟ್ರಿರಸ್ತೆ, ಹಾಸ್ ಮ್ಯಾಟ್ ರಸ್ತೆ, ಅರಮನೆ ಮೈದಾನ ಸೇರಿದಂತೆ ಹಲವೆಡೆ ಪಾದಯಾತ್ರೆ ಸಾಗಲಿದ್ದು, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಕೊನೆಯಾಗಲಿದೆ ಎಂದರು.
ಇನ್ನು ಮೇಕೆದಾಟು ಯೋಜನೆಯಿಂದ ಸುಮಾರು 2.5ಕೋಟಿ ಜನರಿಗೆ ನೀರು ಸಿಗಲಿದೆ. ಹಾಗಾಗಿ ಈ ಯೋಜನೆ ಆಗಲೇಬೇಕಿದೆ. ನೆಲ,ಜಲ,ಭಾಷೆಗಾಗಿ ಎಲ್ಲರನ್ನೂ ಕರೆದೋಯ್ಯುತ್ತಿದ್ದೇವೆ. ಸರ್ವಪಕ್ಷ ನಾಯಕರನ್ನು ಕರೆದೊಯ್ಯುತ್ತಿದ್ದೇವೆ. ಆದರೆ ಇವರು ಕೇಂದ್ರಕ್ಕೆ ಈ ಬಗ್ಗೆ ಮಾಹಿತಿ ಮುಟ್ಟಿಸಲ್ಲ. ಮೋದಿಯವರ ಮುಂದೆ ಮಾತನಾಡುವ ಶಕ್ತಿಯಿಲ್ಲ. ಮೋದಿಯವರನ್ನು ಸುತ್ತುವುದಷ್ಟೇ ಅವರ ಕೆಲಸ. ಗಣೇಶ ಸುತ್ತಿದಂತೆ ಸುತ್ತಿ ಸುಮ್ಮನಾಗುತ್ತಾರೆ. ಇವರಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದ್ದಾರೆ.