ಹಾಳಾದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದರೆ ಬಾರೀ ದಂಡ ತೆರಬೇಕಾಗುತ್ತದೆ ಎಚ್ಚರ

ಮಂಗಳವಾರ, 28 ಮೇ 2019 (13:06 IST)
ಬೆಂಗಳೂರು : ಇನ್ನು ಮುಂದೆ ಹಾಳಾದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದರೆ ಬಾರೀ ದಂಡ ವಿಧಿಸುವ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ ಎನ್ನಲಾಗಿದೆ.




ಹೌದು, ವಾಹನ ಹಾಳಾದಾಗ ಅದನ್ನು ದುರಸ್ತಿ ಮಾಡಿಸದೆ ರಸ್ತೆ ಬದಿ ನಿಲ್ಲಿಸುವುದು ಹೆಚ್ಚಾಗಿ ಕಂಡುಬಂದಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪಾರ್ಕಿಂಗ್‌ ಮಾಡುವ ಸಮಯದ ಆಧಾರದ ಮೇಲೆ ದಂಡ ವಿಧಿಸುವ ಕ್ರಮವನ್ನು ಜಾರಿಗೊಳಿಸಲಾಗಿದೆ.


ಕೆಟ್ಟುನಿಂತ ವಾಹನವನ್ನು ರಸ್ತೆ ಬದಿ ಒಂದು ಗಂಟೆ ನಿಲ್ಲಿಸಿದರೆ 50 ರೂ. ದಂಡ ವಿಧಿಸಲಾಗುತ್ತದೆ. ಇಡೀ ದಿನ ನಿಲ್ಲಿಸಿದರೆ 1,200 ರೂ. ಹಾಗೂ ಒಂದು ತಿಂಗಳು ನಿಲ್ಲಿಸಿರುವುದು ಕಂಡು ಬಂದರೆ 36,000 ರೂ. ದಂಡ ಹಾಕಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ