ಪ್ರಬಲ ರಾಷ್ಟ್ರವಾದ ರಷ್ಯಾದ ಎದುರು ಪುಟ್ಟ ದೇಶ ಉಕ್ರೇನ್ ದಿಟ್ಟತನದಿಂದ ಹೋರಾಡುತ್ತಿರುವುದರ ಹಿಂದೆ ಅಮೆರಿಕ, ಇಂಗ್ರೆಂಡ್, ಜರ್ಮನಿ ಸೇರಿದಂತೆ ಹಲವು ಬಲಾಢ್ಯ ಪಾಶ್ಚಿಮಾತ್ಯ ದೇಶಗಳಿವೆ. ಈ ದೇಶಗಳು ಉಕ್ರೇನ್ ಗೆ ಶಾಸ್ತ್ರಾಸ್ತ್ರ ಪೂರೈಕೆ, ಸೈನಿಕ ನೆರವು, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೆಂಬಲವಾಗಿನಿಂತಿವೆ. ಜೊತೆಗೆ ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವ ಮೂಲಕ ರಷ್ಯಾವನ್ನು ಜಾಗತಿಕವಾಗಿ ಏಂಕಾಂಗಿಯಾಗಿಸುವ ಪ್ರಯತ್ನದಲ್ಲಿ ತೊಡಗಿವೆ. ಈ ಎಲ್ಲಾ ಬೆಳವಣಿಗೆಗಳಿಂದ ಕೆಂಡಾಮಂಡಲವಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಶ್ಚಿಮಾತ್ಯ ದೇಶಗಳು ಉಕ್ರೇನ್-ರಷ್ಯಾ ವಿವಾದದಲ್ಲಿ ಮಧ್ಯಪ್ರವೇಶಿಸುವುದು ನಿಲ್ಲಿಸದಿದ್ದರೆ ಯುದ್ಧ ಉಕ್ರೇನ್ ಗಡಿಯಾಚೆಗೂ ವಿಸ್ತರಿಸಬಹುದು ಎಂದು ಎಚ್ಚರಿಸಿದ್ದಾರೆ.