ನಾವು ತಪ್ಪು ಮಾಡಿದ್ರೆ ಸಾಕ್ಷಿ ಇರಬೇಕಲ್ವಾ ಅಂತಾ ಡಿಕೆಶಿ ತಿರುಗೇಟು

ಮಂಗಳವಾರ, 22 ನವೆಂಬರ್ 2022 (14:29 IST)
ಚಿಲುಮೆ ಹಗರಣದ ಸಂಬಂಧ ಎಲೆಕ್ಷನ್ ಕಮಿಷನ್ ಗೆ ದೂರು ನೀಡ್ತೇವೆ .ನಾವೇನು ಮಾಡಿಲ್ಲ ಕಾಂಗ್ರೆಸ್ ಮಾಡಿದೆ ಅಂತಾ ಸಿಎಂ ಹೇಳಿದ್ದಾರೆ.ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡ್ತೀವೆ ಎಂದು ಡಿಕೆ ಶಿವಕುಮಾರ್ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
 
ನಾಳೆ ಸಮಯ ನೀಡಿದ್ದಾರೆ,ದೂರು ನೀಡ್ತೀವೆ.ನಾವೇನಾದರು ತಪ್ಪು ಮಾಡಿದ್ರೆ ಅದಕ್ಕೂ ಸಾಕ್ಷಿ ಇರುತ್ತೆ ಅಲ್ವಾ?ಸ್ಟೇಜ್ ಬೈ ಸ್ಟೇಜ್ ಏನೆಲ್ಲಾ ಆಗಿದೆ ಅನ್ನೋ ಮಾಹಿತಿ ಇದೆ.ಚಿಲುಮೆ ಮಾತ್ರವಲ್ಲ ಇದೇ ರೀತಿ ಬೇರೆ ಸಂಸ್ಥೆಯಿಂದಲೂ ಇದೇ ರೀತಿ ಕೃತ್ಯ ಆಗಿದೆ.ಡೇಟಾವನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ.ಗರುಡ ಆ್ಯಪ್ ಅನ್ನು ಖಾಸಗಿಯವರು ಬಳಸಲು ಸಾಧ್ಯವಿಲ್ಲ.ಹೆಸರು ಡಿಲೀಟ್ ಮಾಡಲು ಫಾರಂ 7 ಇರಬೇಕು .ಅದನ್ನೆಲ್ಲ ಹೇಗೆ ಡಿಲೀಟ್ ಮಾಡಿದ್ರು..?ಫಾರಂ ಎಲ್ಲಿದೆ..?ಯಾರು ಸಹಿ ಮಾಡಿದ್ರು?ಯಾರು ಅದಕ್ಕೆಲ್ಲ ಸಹಿ ಮಾಡಿದ್ದಾರೆ ಗೊತ್ತಾಗಬೇಕಲ್ವಾ?ಕಳ್ಳತನ ಮಾಡಿದೆ ಎಂದು ಆರೋಪಿ‌ ಹೇಳಬಹುದು
ಮಾಡಿಸಿದವರ್ಯಾರು ಅಂತಾ ಗೊತ್ತಾಗಬೇಕಲ್ವಾ..?ಇಡಿ ವಿಚಾರವಾಗಿ ನಾಳೆ ಕೋರ್ಟ್ ನಲ್ಲಿ ಕೇಸಿದೆ  ಹಾಗಾಗಿ ಹೋಗುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿ ದೆಹಲಿಗೆ ಹೊರಟರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ