ಹಣದ ಅವ್ಯವಹಾರ ಚಿಲುಮೆ ಕಛೇರಿಯಲ್ಲಿದೆ ಎಂದು ಆರೋಪಿ ಮಾಡಿದ ಡಿಕೆಶಿ

ಶನಿವಾರ, 19 ನವೆಂಬರ್ 2022 (16:00 IST)
ಕೆಪಿಸಿಸಿ ಕಚೇರಿಯಲ್ಲಿ 105 ನೇ ಇಂದಿರಾಗಾಂಧಿ ಜನ್ಮ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ.ಇಂದಿರಾಗಾಂಧಿ ಭಾವಚಿತ್ರಕ್ಕೆ ಡಿಕೆಶಿ ಪುಷ್ಪ ನಮನ ಸಲ್ಲಿಸಿದ್ದು,ಸಿಟಿ ಸಿವಿಲ್ ಕೋರ್ಟ್ ಗೆ ಐಟಿ ವಿಚಾರಣೆಗೆ ಹಾಜರಾಗಬೇಕಾದ ಹಿನ್ನೆಲೆ ಆತುರವಾಗಿ ಪುಷ್ಪ ನಮನ ಸಲ್ಲಿಸಿ  ಡಿಕೆಶಿ ಹೊರಟ್ಟಿದ್ದಾರೆ.
 
ಈ ವೇಳೆ ಮಾತನಾಡಿದ ಡಿಕೆಶಿವಕುಮಾರ್ ಓಟರ್ ಲಿಸ್ಟ್ ನಲ್ಲೂ ಭ್ರಷ್ಟತನವನ್ನು ಮಾಧ್ಯಮದ ಮುಂದೆಯೂ ಇಟ್ಟಿದ್ದೇವೆ.ಸರ್ಕಾರ ಯಾರನ್ನೂ ಇದುವರೆಗೆ ಅರೆಸ್ಟ್ ಮಾಡಿಲ್ಲ.ನೋಟ್ ಕೌಂಟಿಂಗ್ ಮಿಷನ್ ಕೂಡ ಅದೇ ಕಚೇರಿಯಲ್ಲಿ ಇದೆ.೨೦೦೦ ರೂ. ಮೇಲೆ ಯಾರೂ ಹಣ ಇಸ್ಕೊಳ್ಳುವಂತಿಲ್ಲ.ಹಣದ ಅವ್ಯವಹಾರ ಕೂಡ ಚಿಲುಮೆ ಕಚೇರಿಯಲ್ಲಿ ನಡೆದಿದೆ ಎಂದು ಡಿಕೆ ಶಿವಕುಮಾರ್  ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ