ಎಸ್ ಟಿ ಸೋಮಶೇಖರ್ ಪಕ್ಷಕ್ಕೆ ವಾಪಸ್ ಬರುತ್ತೇನೆ ಎಂದು ನಮ್ಮ ನಾಯಕರ ಜೊತೆ ಮಾತಾಡಿದ್ರೆ ನಾವೆಲ್ಲ ಒಪ್ಪುತ್ತೇವೆ

ಗುರುವಾರ, 17 ಆಗಸ್ಟ್ 2023 (16:20 IST)
ಎಸ್ ಟಿ ಸೋಮಶೇಖರ್ ಪಕ್ಷಕ್ಕೆ ವಾಪಸ್ ಬರುತ್ತೇನೆ ಎಂದು ನಮ್ಮ ನಾಯಕರ ಜೊತೆ ಮಾತಾಡಿದ್ರೆ ನಾವೆಲ್ಲ ಒಪ್ಪುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.ಎಸ್ ಟಿ ಸೋಮಶೇಖರ್ ಕಾಂಗ್ರೆಸ್‌ ಪರ ಸಾಪ್ಟ್ ಹೇಳಿಕೆ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಅವರು ನಾನೇನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್‌ ಗೆ ದುಡಿದಂತವರು ನಾನು ಕಾಂಗ್ರೆಸ್‌ ರಾಜ್ಯಾಧ್ಯಕ್ಷನಾಗಿದ್ದಾಗ ಅವರನ್ನ ಜಿಲ್ಲಾಧ್ಯಕ್ಷನಾಗಿ ಮಾಡಿದ್ದೇ ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನ ಪಕ್ಷವು ಅದೇ ರೀತಿಯಲ್ಲಿ ನೋಡಿಕೊಂಡಿತ್ತು. ಅವರು ನಮ್ಮ ಪಕ್ಷದಲ್ಲಿ ಮೂರು ಭಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಮುಂದೆ ಅವರು ಕಾಂಗ್ರೆಸ್‌ ಪಕ್ಷದಲ್ಲಿಯೇ ಉಳಿದಿದ್ರೆ ಅವರಿಗೂ ಈಗಾ ಸಚಿವಸ್ಥಾನ ಸಿಗಬಹುದಿತ್ತೇನೊ,ಈಗಾ ಅವರಿಗೆ ಆ ಪಕ್ಷದಲ್ಲಿ ಬೇಸರವಾಗಿದೆ ಎಂದು ಅನೇಕ ಭಾರಿ ಹೇಳಿದ್ದಾರೆ.ಅವರು ಪಕ್ಷಕ್ಕೆ ವಾಪಸ್ ಬರುತ್ತೇನೆ ಎಂದು ನಮ್ಮ ನಾಯಕರ ಜೊತೆ ಮಾತಾಡಿದ್ರೆ ನಾವೆಲ್ಲ ಒಪ್ಪುತ್ತೇವೆ. ಬರಬಾರದು ಅಂತಾ ನಾವು ಅಡತಡೆ ಮಾಡೊಕೆ ಹೋಗಲ್ಲ. ಪಕ್ಷಕ್ಕೆ ಸ್ಥಾನವನ್ನ ನೋಡಿ ಬರ್ತಿನಿ ಎಂದು ಹೇಳಿಲ್ಲ.ನಮ್ಮ ಪಕ್ಷದ ಸಿದ್ಧಾಂತ ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಅವರು ಬರುತ್ತಾರೆ. ಒಳ್ಳೆ ಕೆಲಸ ಮಾಡಿ ಜನಪರ ಕೆಲಸಮಾಡಿ ಜನಮನ್ನಣೆ ಗಳಿಸಿದ್ರೆ ಅವರಿಗೆ ಖಂಡಿತವಾಗಿ ಅವಕಾಶ ಸಿಗುತ್ತೆ.ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಬೇದ ಬಾವ ಮಾಡೊಕೆ ಹೋಗಲ್ಲ.ಅವರ ಸಾಮರ್ಥ್ಯವನ್ನು ನೋಡಿ ಅವರಿಗೆ ಅಧಿಕಾರಗಳನ್ನು ಕೊಡುತ್ತಾರೆ.ರಾಜಕೀಯದಲ್ಲಿ ಎಲ್ಲವು ಸಾಧ್ಯಯಿದೆ ಎಂದು ಹೇಳುವ ಮೂಲಕ, ಎಸ್ ಟಿ ಸೋಮಶೇಖರ್ ಕಾಂಗ್ರೆಸ್‌ ಗೆ  ಬರುವ ಸುಳಿವು ಕೊಟ್ಟ ಪರಮೇಶ್ವರ್. 
 
ಪ್ರಗತಿಪರರು, ಬುದ್ದಿಜೀವಿಗಳಿಗೆ ಬೆದರಿಕೆ ಕರೆ ವಿಚಾರವಾಗಿ ಪ್ರತಿಕ್ರಿಯಿಸಿ ಕೆಲ‌ ಸಾಹಿತಿಗಳು ಸಮಯ ಕೇಳೀದ್ದಾರೆ, ಸಮಯ ನೀಡಿ ಭೇಟಿಯಾಗ್ತೇನೆ.ಅವರು ಬರೆದ ಪತ್ರವನ್ನ ಡಿಜಿಪಿಗೆ ಕಳುಹಿಸಿಕೊಡ್ತೀನಿ.ನಾವು ಕಲ್ಬುರ್ಗಿ, ಗೌರಿಲಂಕೇಶ್ ಹತ್ಯೆ ಇನ್ನೂ ಮರೆತಿಲ್ಲ. ಅಂತಹ ಸಂದರ್ಭದಲ್ಲಿ ಥ್ರಟ್‌ ಬಂದಿದೆ ಅಂದ್ರೆ ಗಂಭಿರ ತೆಗೊದುಳ್ಳಬೇಕಾಗುತ್ತೆ.ಈಗಾಗಲೇ ಕಮಿಷನರ್,  ಡಿಜಿಪಿಗೆ ರಕ್ಷಣೆ ನೀಡುವಂತೆ ಸೂಚನೆ ಕೊಟ್ಟಿದ್ದೇನೆ. ಈ ಪ್ರಕರಣವನ್ನ ನಾವು ಗಂಭೀವಾಗಿ ತಗೊಳ್ತೀವಿ. ಸಾಹಿತಿಗಳನ್ನ ಭೇಟಿಯಾದ ಮೇಲೆ ಗೊತ್ತಾಗುತ್ತೆ ಯಾರು ಯಾಕೆ ಬರೆದರು ಅಂತ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ