ಇಂದಿನಿಂದ ಮೈಸೂರಿನಲ್ಲಿ ಮಾಸ್ಕ ಧರಿಸದಿದ್ದರೆ ಬೀಳುತ್ತೆ ಭಾರೀ ದಂಡ
ಶುಕ್ರವಾರ, 1 ಮೇ 2020 (09:41 IST)
ಮೈಸೂರು : ಇಂದಿನಿಂದ ಮೈಸೂರಿನಲ್ಲಿ ಮಾಸ್ಕ ಧರಿಸದಿದ್ದರೆ ಭಾರೀ ದಂಡ ವಿಧಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಆದೇಶಿಸಿದೆ.
ಕೊರೊನಾ ಹರಡದಂತೆ ತಡೆಗಟ್ಟಲು ಎಲ್ಲಾ ಜನರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಜನರು ಕ್ಯಾರೆ ಅನ್ನದ ಹಿನ್ನಲೆಯಲ್ಲಿ ಇದೀಗ ಮಹಾನಗರ ಪಾಲಿಕೆ ಮಾಸ್ಕ್ ಧರಿಸದವರಿಗೆ ಇಂದಿನಿಂದ ದಂಡ ವಿಧಿಸಲು ಮುಂದಾಗದೆ.
ಮಾಸ್ಕ್ ಧರಿಸದಿದ್ದರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ 100 ರೂ ವಸೂಲಿಗೆ ಪಾಲಿಕೆ ಆದೇಶಿಸಿದೆ. ಪೊಲೀಸ್ ನೆರವಿನೊಂದಿಗೆ ದಂಡ ವಸೂಲಿಗೆ ಮುಂದಾಗಿದೆ. ಮೈಸೂರಿನ ಎಲ್ಲಾ 9 ವಲಯಗಳಲ್ಲಿ ಕಟ್ಟಾಜ್ಞೆ ಜಾರಿಗೆ ತರಲಾಗಿದೆ.