ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಮತ್ತು ಕಬಾಬ್ ತಯಾರಿಕೆ ಕೃತಕ ಬಣ್ಣ ಬಳಕೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಇದೀಗ ಪಾನಿಪುರಿ ಪ್ರಿಯರಿಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಶಾಕ್ ನೀಡಲಿದೆ.
ಪಾನಿಪುರಿಗೆ ಬಳಸುವ ಸಾಸ್, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಇದೀಗ ಪಾನಿಪುರಿಗೆ ಬಳಸುವ ಕೆಲ ಸಾಮಗ್ರಿಗಳನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಸಂಬಂಧ ಈಗಾಗಲೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಪಾನಿಪುರಿ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಡೆಸಿದ ಎಲ್ಲ ಮಾದರಿಗಳ ಫಲಿತಾಂಶ ಬಂದ್ಮೇಲೆ ಸಭೆ ನಡೆಸಿ ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.